ಕಿಚ್ಚ ಸುದೀಪ್, ಕನ್ನಡಲ್ಲಿ ನಿರ್ಮಾಪಕರನ್ನು ಕೆಲವೇ ಕೆಲವು ಸ್ಟಾರ್ ನಟರಲ್ಲಿ ಒಬ್ಬರು. ಅವರು ಯಾವಾಗಲೂ ನಿರ್ಮಾಪಕರ ಜೊತೆ ಇರುತ್ತಾರೆ. ಅವರು ನಿರ್ಮಾಪಕರಿಗೆ ಷರತ್ತು ಹಾಕೋದಿಲ್ಲ. ಅವರಂತೆ ಎಲ್ಲ ನಟರೂ ನಿರ್ಮಾಪಕರ ಕಷ್ಟಗಳಿಗೆ ಸ್ಪಂದಿಸೋದಿಲ್ಲ. ಹೀಗಾಗಿಯೇ, ಅವರು ಕೇಳದಿದ್ದರೂ ನಾನೇ 8 ಕೋಟಿ ಸಂಭಾವನೆ ಕೊಟ್ಟಿದ್ದೇನೆ. ಹೀಗೆಂದು ಹೇಳಿರುವುದು ಸೂರಪ್ಪ ಬಾಬು.
ಸುದೀಪ್ ಜೊತೆ ಕೋಟಿಗೊಬ್ಬ 3 ಚಿತ್ರ ನಿರ್ಮಿಸುತ್ತಿರುವ ಸೂರಪ್ಪ ಬಾಬು, ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಸುದೀಪ್, ಚಿತ್ರದ ಪ್ರತಿ ಹಂತದಲ್ಲೂ ನಿರ್ಮಾಪಕರ ಜೊತೆಗಿರುತ್ತಾರೆ. 8 ಕೋಟಿ, ಸುದೀಪ್ ಕೇಳಿದ್ದಲ್ಲ. ನಾನೇ ಕೊಟ್ಟಿದ್ದು ಎಂದಿದ್ದಾರೆ ಸೂರಪ್ಪ ಬಾಬು.
ಚಿತ್ರದ ಚಿತ್ರೀಕರಣ ಶೀಘ್ರದಲ್ಲಿಯೇ ಶುರುವಾಗಲಿದ್ದು, ಸ್ಪೇನ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಕನ್ನಡದ ನಟಿಯೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ ಸೂರಪ್ಪ ಬಾಬು.
ಕನ್ನಡದಲ್ಲಿ ನಟರು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎಂಬ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುವುದಿಲ್ಲ. ಅಲ್ಲಿ ಇಲ್ಲಿ ಕಿವಿಗೆ ಬಿದ್ದ ಮಾತುಗಳನ್ನಷ್ಟೇ ಕೇಳುತ್ತಿದ್ದವರಿಗೆ ಸೂರಪ್ಪ ಬಾಬು, ಬಹಿರಂಗವಾಗಿಯೇ ಹೇಳುವ ಮೂಲಕ ರಹಸ್ಯ ಸ್ಫೋಟಿಸಿರುವುದು ನಿಜ.