` ಡಾರ್ಕ್ ನೈಟ್‍ನಲ್ಲಿ.. ಜೆಕೆ, ಅನುಪಾಮಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jk, anupama in dark night
Anupama, JK, Dayal Image

ದಯಾಳ್ ಪದ್ಮನಾಭ್ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಬಿಗ್‍ಬಾಸ್ ಮನೆಯಿಂದ ಎರಡೇ ವಾರದಲ್ಲಿ ಎಲಿಮಿನೇಟ್ ಆಗಿ ಹೊರಬಿದ್ದ ದಯಾಳ್, ಈಗ ಡಾರ್ಕ್ ನೈಟ್ ಚಿತ್ರ ಮಾಡೋದಕ್ಕೆ ರೆಡಿಯಾಗುತ್ತಿದ್ದಾರೆ.

ದಯಾಳ್ ಅವರು ಆಯ್ಕೆ ಮಾಡಿಕೊಂಡಿರೋದು ಮೋಹನ್ ಹಬ್ಬು ಅವರ ನಾಟಕ ಕರಾಳ ರಾತ್ರಿಯನ್ನ. ಆ ನಾಟಕಕ್ಕೆ ಒಪ್ಪಿಗೆ ಪಡೆದಿರುವ ದಯಾಳ್, ಚಿತ್ರದ ಚಿತ್ರಕಥೆ ರಚಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. 

ಬಿಗ್‍ಬಾಸ್ ಮನೆಯಲ್ಲಿದ್ದಾಗ ಜೆಕೆ ಹಾಗೂ ಅನುಪಮಾಗೆ ಕಥೆಯನ್ನೂ ಹೇಳಿದ್ದರಂತೆ. ಅವರು ಬಿಗ್‍ಬಾಸ್‍ನಿಂದ ಬಂದಮೇಲೆ ಮತ್ತೊಮ್ಮೆ ಭೇಟಿ ಮಾಡಿ ಫೈನಲ್ ಮಾಡತ್ತೇನೆ. ನನ್ನ ಪ್ರಕಾರ ಅವರು ಒಪ್ಪಿಯೇ ಒಪ್ಪುತ್ತಾರೆ ಎಂದು ವಿಶ್ವಾಸದಿಂದ ಹೇಳಿದ್ದಾರೆ ದಯಾಳ್.

Kurukshetra Celebrity Show Gallery

Rightbanner02_gimmick_inside

Nanna Prakara Movie Images