` ಒಳ್ಳೆ ಹುಡ್ಗ ಪ್ರಥಮ್‍ಗೆ ಅಡ್ವಾಣಿ ಆಶೀರ್ವಾದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
lk advani blesses pratham
Pratham, LK Advani Image

ಒಳ್ಳೆ ಹುಡ್ಗ ಪ್ರಥಮ್ ಬಿಲ್ಡಪ್ ಅನ್ನೋ ಹೊಸ ಚಿತ್ರ ಮಾಡಿರುವುದು ಗೊತ್ತಿರುವ ವಿಚಾರವೇ. ಆ ಚಿತ್ರಕ್ಕೆ ಇಡೀ ದೇಶ ಮೆಚ್ಚುವ ವ್ಯಕ್ತಿಯಿಂದ ಕ್ಲಾಪ್ ಮಾಡಿಸುತ್ತೇನೆ ಎಂದು ಬಿಲ್ಡಪ್ ಕೊಟ್ಟಿದ್ದರು ಪ್ರಥಮ್. ಈಗ ದೇಶದ ಹಿರಿಯ ರಾಜಕಾರಣಿ, ಮುತ್ಸದ್ಧಿ ಎಲ್.ಕೆ. ಅಡ್ವಾಣಿಯವರನ್ನು ಭೇಟಿ ಮಾಡಿ ಬಂದಿದ್ದಾರೆ. ಅಷ್ಟೇ ಅಲ್ಲ, ಅಡ್ವಾಣಿ ಅವರಿಗೆ ತಮ್ಮ ಸಿನಿಮಾದ ಕ್ಲಾಪ್ ಬೋರ್ಡ್ ಕೊಟ್ಟು ಆಶೀರ್ವಾದ ಪಡೆದಿದ್ದಾರೆ.

ಅಡ್ವಾಣಿಯವರನ್ನು ಭೇಟಿ ಮಾಡಿದ ಫೋಟೋ, ನನ್ನ ಜೀವನದ ಬೆಸ್ಟ್ ಫೋಟೋ ಎಂದಿರುವ ಪ್ರಥಮ್‍ಗೆ, ಜೀವನದಲ್ಲಿ ಒಮ್ಮೆಯಾದರೂ ಅಡ್ವಾಣಿ ಅವರನ್ನು ನೋಡುವ ಆಸೆ ಇತ್ತಂತೆ. ನಾನು ಮೋದಿಯನ್ನು ನೋಡಿಲ್ಲ, ಮೋದಿಯನ್ನು ಸೃಷ್ಟಿಸಿದ ಬ್ರಹ್ಮನನ್ನು ನೋಡಿಬಂದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ ಪ್ರಥಮ್. 

I Love You Movie Gallery

Rightbanner02_butterfly_inside

Paddehuli Movie Gallery