ಮಂತ್ರಂ. ಕನ್ನಡದಲ್ಲಿ ಹಾರರ್ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ. ಟ್ರೇಲರ್ ಮೂಲಕವೇ ಸದ್ದು ಮಾಡಿದ ಚಿತ್ರ ಥಿಯೇಟರ್‍ಗೆ ಎಂಟ್ರಿ ಕೊಟ್ಟಿದೆ. ಹೊಸಬರೇ ಮಾಡಿರುವ ಚಿತ್ರ ಭಯ ಹುಟ್ಟಿಸಿರುವುದಂತೂ ಸತ್ಯ.
ಟ್ರೇಲರ್ ನೋಡಿದವರಿಗೆ ನಾಯಕಿ ಸುಂದರಿಯಾಗಿದ್ದಾಳೆಂದು ಅನಿಸುವುದೇ ಇಲ್ಲ ಎನ್ನುವುದು ಚಿತ್ರ ನಿರ್ದೇಶಕರು ಹಾಗೂ ಪಲ್ಲವಿಗೆ ಸಿಕ್ಕಿರುವ ಕಾಂಪ್ಲಿಮೆಂಟು. ನಾಯಕಿಯ ಧ್ವನಿಯಂತೂ ಬೆಚ್ಚಿ ಬೀಳಿಸುವ ಹಾಗಿದೆ.
5 ತ್ರಿಶೂಲಗಳ ಕಥೆ ಏನು..? ಅವಳೇಕೆ ಹಾಗಿರುತ್ತಾಳೆ..? ಅದು ದೆವ್ವಾನಾ..? ಅಥವಾ ಇದು ಸೈಕಾಲಜಿಕಲ್ ಥ್ರಿಲ್ಲರ್ ಮೂವಿನಾ..? ಸೇಡಿನ ಕಥೆನಾ..? ಮಾಟ, ಮಂತ್ರ ದೇವರ ಆಟಾನಾ..? ಇಷ್ಟೆಲ್ಲ ಪ್ರಶ್ನೆಗಳೂ ಏಕಕಾಲಕ್ಕೆ ಉದ್ಭವವಾಗಿವೆ.
ಬಹುಶಃ ಇಷ್ಟು ಪ್ರಶ್ನೆಗಳು ಮೂಡಿರುವುದರಲ್ಲೇ ಚಿತ್ರದ ನಿರ್ದೇಶಕರ ಸಕ್ಸಸ್ ಇದೆ. ಭಯಬೀಳೋಕೆ ಹೆದರದೇ ಇರುವವರು ಈ ವಾರ ಮಂತ್ರಂ ನೋಡಬಹುದು. ಎಸ್.ಎಸ್. ಸಜ್ಜನ್ ಎಂಬ ಹೊಸ ಹುಡುಗನ ಸಾಹಸಕ್ಕೆ, ಅಮರ್ ಎಂಬ ಹೊಸ ನಿರ್ಮಾಪಕರ ಪ್ರಯತ್ನಕ್ಕೆ ಶಹಬ್ಬಾಸ್ ಹೇಳಬಹುದು.
Related Articles :-