ಮಫ್ತಿ. ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಕಾಂಬಿನೇಷನ್‍ನ ಚಿತ್ರ ಹೆಸರು, ಟ್ರೇಲರ್‍ನಿಂದಲೇ ಸದ್ದು ಮಾಡಿದ ಚಿತ್ರ. ಆ ಚಿತ್ರದ ಕಥೆಯೇನು..? ಅದೇ ದೊಡ್ಡ ರಹಸ್ಯ. ಮೇಲ್ನೋಟಕ್ಕೆ ಅದು ಉಗ್ರಂ, ರಥಾವರ ಚಿತ್ರದಂತೆ ಕಂಡರೂ, ಇದು ಅದಲ್ಲ ಎನ್ನಿಸಿಬಿಡುತ್ತೆ.
ಮಫ್ತಿ ಎಂದರೆ ಪೊಲೀಸ್ ಭಾಷೆಯಲ್ಲಿ ಅಂಡರ್ ಕವರ್ ಅಂತಾ. ಈ ಚಿತ್ರದಲ್ಲಿ ಮಫ್ತಿಯಲ್ಲಿ ಇರೋವ್ರು ಯಾರು..? ಡಾನ್ ಯಾರು..? ಅನ್ನೋದೇ ಅಸಲಿ ಕಥೆ. ಪ್ರತಿಯೊಬ್ಬನಲ್ಲೂ ಎರಡು ಮುಖಗಳಿರುತ್ತವೆ. ರಾಮ ಹಾಗೂ ರಾವಣ ಒಬ್ಬನಲ್ಲೇ ಇರುತ್ತಾನೆ. ಅವರಿಗೆ, ಅವರು ಮಾಡುತ್ತಿರುವುದು ಸರಿಯಾಗಿಯೇ ಕಾಣುತ್ತೆ. ಈ ಭಾವನೆಗಳ ಜೊತೆ ಜೊತೆಯಲ್ಲಿಯೇ ಚಿತ್ರದ ಕಥೆ ಸಾಗಲಿದೆ.
ಹಾಗಾದರೆ, ಪೊಲೀಸ್ ಯಾರು..? ಡಾನ್ ಯಾರು..? ಶಿವರಾಜ್ ಕುಮಾರ್ ಅಥವಾ ಶ್ರೀಮುರಳಿ. ಕುತೂಹಲಕ್ಕೆ ಉತ್ತರ ಬೇಕೆಂದರೆ, ಚಿತ್ರಮಂದಿರಕ್ಕೇ ಹೋಗಿ ನೋಡಿ.
ಸಿನಿಮಾ ದಾಖಲೆಯೆಂಬಂತೆ ಸುಮಾರು 400 ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಜಯಣ್ಣ ಭೋಗೇಂದ್ರ ಜೋಡಿಯ ಈ ಚಿತ್ರಕ್ಕೆ ನಿರ್ದೇಶಕರು ಹೊಸಬರು. ನಿರ್ದೇಶಕ ನರ್ತನ್‍ಗೆ ಇದು ಮೊದಲ ಚಿತ್ರ, ಮೊದಲ ಚಿತ್ರದಲ್ಲೇ ಸ್ಟಾರ್‍ಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನರ್ತನ್, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.