ರಮ್ಯಾ, ನೀವು ಭಾರತದ ಆಸ್ತಿ, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಆಸ್ತಿ. ಆ ದೇವರು ನಿಮಗೆ ಶುಭವನ್ನುಂಟು ಮಾಡಲಿ. ಹುಟ್ಟುಹಬ್ಬದ ಶುಭಾಶಯಗಳು.
ಇಂಥಾದ್ದೊಂದು ಶುಭಾಶಯ ಕೋರಿರುವುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಕಾಂಗ್ರೆಸ್‍ನ ಯುವರಾಜ, ನಟಿ ರಮ್ಯಾ ಅವರಿಗೆ ಶುಭ ಕೋರಿರುವುದು ಸೆನ್ಸೇಷನ್ ಸೃಷ್ಟಿಸಿದೆ.
ಇಂದು ರಮ್ಯಾ ಅವರ 34ನೇ ಹುಟ್ಟುಹಬ್ಬ. ಹೀಗಾಗಿ ಪಕ್ಷದ ಸೋಷಿಯಲ್ ಮೀಡಿಯಾ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ರಮ್ಯಾ ಅವರಿಗೆ ರಾಹುಲ್ ಗಾಂಧಿ ಶುಭ ಹಾರೈಸಿದ್ದರೂ ಇರಬಹುದು ಎಂದುಕೊಂಡರೆ, ಅದು ಇನ್ನೊಂದು ಗೊಂದಲ ಶುರು ಮಾಡುತ್ತೆ.
ಏಕೆಂದರೆ, ರಮ್ಯಾ ಅವರ ಅಧಿಕೃತ ಟ್ವಿಟರ್‍ನಲ್ಲಾಗಲಿ ಅಥವಾ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಾಗಲೀ, ಇಂಥಾದ್ದೊಂದು ಶುಭ ಹಾರೈಕೆಯ ಯಾವುದೇ ಟ್ವೀಟ್ ಇಲ್ಲ. ಹಾಗಾದರೆ, ಸೋಷಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವುದು ಏನು..?
ಏನೇ ಇರಲಿ, ರಮ್ಯಾಗೆ ಹುಟ್ಟುಹಬ್ಬದ ಶುಭಾಶಯಗಳು.