ರಾಗಿಣಿ ದ್ವಿವೇದಿ ಚಂದನವನದ ತುಪ್ಪದ ಗೊಂಬೆ. ದೊಡ್ಡಣ್ಣ ಕನ್ನಡ ಚಿತ್ರರಂಗದ ಸೀನಿಯರ್ ಕಲಾವಿದ. ಇವರಿಬ್ಬರೂ ಜೋಡಿನಾ..? ಏನು.. ಚೀನೀ ಕಮ್‍ನಂತಾ ಸ್ಟೋರಿನಾ..? ಇಂಥಾ ಪ್ರಶ್ನೆಗಳನ್ನೆಲ್ಲ ಕೇಳಬೇಡಿ. ಇವರಿಬ್ಬರೂ ಜೋಡಿಯಾಗಿರೋದು ಸಿನಿಮಾದಲ್ಲಿ ಅಲ್ಲ, ಕಿರುತೆರೆಯಲ್ಲಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋ ಶುರುವಾಗುತ್ತಿದೆ. ಆ ರಿಯಾಲಿಟಿ ಶೋಗೆ ದೊಡ್ಡಣ್ಣ ಹಾಗೂ ರಾಗಿಣಿ ತೀರ್ಪುಗಾರರು. ಜೊತೆಯಲ್ಲಿ ಸ್ಪೆಷಲ್ ಡೈರೆಕ್ಟರ್ ಗುರುಪ್ರಸಾದ್ ಕೂಡಾ ಇರುತ್ತಾರೆ.
ಇತ್ತೀಚೆಗೆ ಕಾಮಿಡಿ ಶೋವೊಂದರ ಮೂಲಕ ಕಿರುತೆರೆಗೆ ಬರುತ್ತಿದ್ದೇನೆ ಎಂಬ ಸುಳಿವು ಕೊಟ್ಟಿದ್ದರು ರಾಗಿಣಿ. ರಾಗಿಣಿಗೆ ಇದು ಫಸ್ಟ್ ಅನುಭವ. ದೊಡ್ಡಣ್ಣನವರಿಗೂ ಕಿರುತೆರೆಯಲ್ಲಿ ಇದು ಪ್ರಥಮ ಅನುಭವ.