ಮಫ್ತಿ, ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಅಭಿನಯದ ಸಿನಿಮಾ. ಸಿನಿಮಾ ಥಿಯೇಟರ್‍ಗೆ ಬರಲು ಸಿದ್ಧವಾಗಿದೆ. ಒಂಟಿ ಸಲಗದಂತೆ ಶ್ರೀಮುರಳಿ ಕಾಣಿಸಿಕೊಂಡಿದ್ದರೆ, ಡಾನ್ ಗೆಟಪ್‍ನಲ್ಲಿದ್ದಾರೆ ಶಿವರಾಜ್ ಕುಮಾರ್. ಚಿತ್ರದ ಟ್ರೇಲರ್ ಮಾಮೂಲಿ ಸ್ಟೈಲ್‍ಗಿಂತ ಭಿನ್ನವಾಗಿದ್ದುದು ಇಡೀ ಚಿತ್ರರಂಗದ ಗಮನ ಸೆಳೆದಿತ್ತು.
ಗಣೇಶ್, ಯಶ್,ರಕ್ಷಿತ್ ಶೆಟ್ಟಿ, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ನಟರು, ಚಿತ್ರದ ಟ್ರೇಲರ್‍ಗೆ ಮೆಚ್ಚುಗೆ ಸೂಚಿಸಿದ್ದರು. ಚಿತ್ರದ ಶೂಟಿಂಗ್ ಅನುಭವ ಹೇಳಿಕೊಂಡಿರುವ ಮುರಳಿ, ಶಿವಣ್ಣ ಶೂಟಿಂಗ್‍ನಲ್ಲಿದ್ದಾಗ ನಿಂತ ಕಡೆ ನಿಲ್ಲೊದಿಲ್ಲ, ಕುಂತ ಕಡೆ ಕೂರೋದಿಲ್ಲ. ಸದಾ ಆ್ಯಕ್ಟಿವ್ ಇರುತ್ತಾರೆ. ಒಂದು ನಿಮಿಷವನ್ನೂ ವೇಸ್ಟ್ ಮಾಡಲ್ಲ ಎಂದಿದ್ದಾರೆ.
ಅವರಿಗೆ ಹೋಲಿಸಿದ್ರೆ, ನಾವೇ ಸೋಮಾರಿಗಳು ಎಂದಿದ್ದಾರೆ ಶ್ರೀಮುರಳಿ. ಸಿನಿಮಾ ಸೂಪರ್ ಆಗಿ ಮೂಡಿಬಂದಿದೆ. ಉಗ್ರಂನಂತೆಯೇ ಇದೂ ಕೂಡಾ ಡಿಫರೆಂಟ್ ಅನುಭವ ನೀಡಲಿದೆ ಎಂಬ ಭರವಸೆಯಲ್ಲಿದ್ದಾರೆ ಶ್ರೀಮುರಳಿ.