ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಶ್ರೀಮುರಳಿ ಜೊತೆ ನಟಿಸಿದ್ದಾರೆ. ಕನ್ನಡದಲ್ಲಿ ಬೇರೆ ಬೇರೆ ಸ್ಟಾರ್‍ಗಳ ಜೊತೆ ಅತಿ ಹೆಚ್ಚು ಸ್ಕ್ರೀನ್ ಹಂಚಿಕೊಂಡಿರುವ ಈಗಿನ ನಟರಲ್ಲಿ ಶಿವರಾಜ್ ಕುಮಾರ್ ನಂ.1. ಇನ್ನು ಶ್ರೀಮುರಳಿ, ಶಿವರಾಜ್ ಕುಮಾರ್‍ಗೆ ಸೋದರ ಸಂಬಂಧಿ. ಹೀಗಾಗಿ ಇಬ್ಬರೂ ಒಟ್ಟಿಗೇ ನಟಿಸಿರುವ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್, ಶ್ರೀಮುರಳಿ ನಟನೆ ನೋಡಿದ್ದಾರೆ.
ಶ್ರೀಮುರಳಿ ತಮ್ಮ ಪಾತ್ರಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆಯುವ ಕಲಾವಿದ. ಅವನನ್ನು ಚಿಕ್ಕ ಮಗುವಾಗಿದ್ದಾಗಿನಿಂದ ನೋಡಿದ್ದೇನೆ. ಆದರೆ, ನಟಿಸುವಾಗಿನ ಆತನ ಶ್ರದ್ಧೆಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ನನ್ನ ಕಸಿನ್ ಎಂದು ಹೇಳುತ್ತಿಲ್ಲ. ಶ್ರೀಮುರಳಿ ಒಬ್ಬ ಅದ್ಭುತ ಕಲಾವಿದ ಎಂದು ಹೊಗಳಿದ್ದಾರೆ ಶಿವಣ್ಣ.
ಚಿತ್ರದಲ್ಲಿ ಶಿವಣ್ಣ ಡಾನ್ ಕ್ಯಾರೆಕ್ಟರ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೀರೋ ಯಾರು..? ನೀವಾ..? ಮುರಳಿನಾ..? ಅಂದ್ರೆ.. ಶಿವಣ್ಣ ಹೇಳೊದು ಏನ್ ಗೊತ್ತಾ..? ಮಫ್ತಿ ಚಿತ್ರಕ್ಕೆ ಮಫ್ತಿ ಚಿತ್ರದ ಕಥೆಯೇ ಹೀರೋ.