` ಸುದೀಪ್ ಆ್ಯಪ್, ಸುದೀಪ್ ವೆಬ್‍ಸೈಟ್ ನೋಡಿದಿರಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep app and website launch
Sudeep App And Website Launched

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಆಗಾಗ್ಗೆ ಸಿಹಿಯಾದ ಶಾಕ್ ಕೊಡ್ತಾನೇ ಇರ್ತಾರೆ. ಆದರೆ, ಈ ಬಾರಿ ಸುದೀಪ್‍ಗೆ ಅಭಿಮಾನಿಗಳೇ ಸಿಹಿ ಸಿಹಿಯಾದ ಉಡುಗೊರೆ ಕೊಟ್ಟಿದ್ದಾರೆ. ಅಭಿಮಾನಿಗಳೇ ಸೇರಿ ಕಿಚ್ಚ ಸುದೀಪ್ ಆ್ಯಪ್ ಹಾಗೂ ವೆಬ್‍ಸೈಟ್ ರೂಪಿಸಿದ್ದಾರೆ. ಇದು ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಸಾಹಸ. ಈ ಸಾಹಸ ಮಾಡಿರೋದು ಬೆಳಗಾವಿ ಜಿಲ್ಲೆಯ ಕಿಚ್ಚನ ಫ್ಯಾನ್ಸ್. 

ಋತ್ವಿಕ್ ಹಾಗೂ ಇನ್ನಿಬ್ಬರು ಗೆಳೆಯರು ಒಟ್ಟಿಗೇ ಸೇರಿ ಈ ಆ್ಯಪ್ ಹಾಗೂ ವೆಬ್ ರೂಪಿಸಿದ್ಧಾರೆ. ಈ ವೆಬ್ ಹಾಗೂ ಆ್ಯಪ್‍ನಲ್ಲಿ ಸುದೀಪ್ ಅವರ ಹೊಸ ಹೊಸ ಸಿನಿಮಾ, ಆ ಸಿನಿಮಾಗಳಿಗೆ ಸಂಬಂಧಪಟ್ಟ ಸುದ್ದಿಗಳು, ಫೋಟೋಗಳೂ ಇರುತ್ತವೆ. ಬಹುಶಃ, ತಮ್ಮ ಹೆಸರಿನಲ್ಲೇ ಒಂದು ಆ್ಯಪ್ ಹಾಗೂ ವೆಬ್‍ಸೈಟ್ ಹೊಂದಿರುವ ಏಕೈಕ ನಟ ಸುದೀಪ್ ಅವರೇ ಇರಬೇಕು.

ಆ್ಯಪ್‍ಗಾಗಿ KSFA  ಎಂದು ಟೈಪ್ ಮಾಡಿ. ವೆಬ್‍ಸೈಟ್ ವಿಳಾಸ ಇದು. ksfaofficial.com