ಕುರುಕ್ಷೇತ್ರ, ಚಿತ್ರ ಶುರುವಾದಾಗಿನಿಂದ ಪಾತ್ರಧಾರಿಗಳ ಆಯ್ಕೆ, ಬದಲಾವಣೆ ಸುದ್ದಿಯಾಗುತ್ತಲೇ ಇದೆ. ಚಿತ್ರದ ಚಿತ್ರೀಕರಣ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಡಬ್ಬಿಂಗ್ ಕೂಡಾ ಶುರುವಾಗಿದೆ. ಆದರೆ, ದುರ್ಯೋಧನನಿಗೆ ನಾಯಕಿ ಯಾರು ಎಂಬುದರ ಬಗ್ಗೆ ಗೊಂದಲವಿದ್ದೇ ಇತ್ತು.
ರಮ್ಯಾ ನಂಬೀಸನ್ ಭಾನುಮತಿಯಾಗಿ ನಟಿಸುತ್ತಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತಾದರೂ, ರಮ್ಯಾ ನಂಬೀಸನ್ ಡೇಟ್ಸ್ ಸಿಗಲೇ ಇಲ್ಲವಂತೆ. ಹೀಗಾಗಿ ರಮ್ಯಾ ನಂಬೀಸನ್ ಅವರನ್ನು ಕೈಬಿಟ್ಟಿರುವ ಚಿತ್ರತಂಡ ಈಗ ಆ ಪಾತ್ರಕ್ಕೆ ಮೇಘನಾ ಅವರನ್ನು ಆಯ್ಕೆ ಮಾಡಿದೆ. ಅಲ್ಲಿಗೆ ಮೇಘನಾ ಭಾನುಮತಿಯಾಗಿ ನಟಿಸಲಿರುವುದು ಖಚಿತ.
ಕುರುಕ್ಷೇತ್ರ ಚಿತ್ರದಲ್ಲಿ ಸ್ಟಾರ್‍ಗಳ ಸಮಾಗಮವೇ ಆಗಿದೆ. ಆ ಸ್ಟಾರ್‍ಗಳ ಪಟ್ಟಿಗೆ ಹೊಸ ಸೇರ್ಪಡೆ ಮೇಘನಾ ರಾಜ್. ಟೆಸ್ಟ್ ಶೂಟ್ ಮುಗಿದಿದ್ದು, ಮೇಘನಾ ಅವರ ಪಾತ್ರದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಶುರುವಾಗಲಿದೆ.