ಹರ್ಷ. ಸದ್ಯಕ್ಕೆ ಅಂಜನೀಪುತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಸತತ ಹಿಟ್ ಕೊಟ್ಟಿರುವ ಹರ್ಷ ಅವರಿಗೂ ಸಿಕ್ಕಾಪಟ್ಟೆ ಡಿಮ್ಯಾಂಡು. ಅವರ ಕೈಲೀಗ ಸಾಲು ಸಾಲು ಸಿನಿಮಾಗಳಿವೆ. ಶಿವರಾಜ್ ಕುಮಾರ್ ಅಭಿನಯದ `ಮೈ ನೇಮ್ ಈಸ್ ಅಂಜಿ' ಚಿತ್ರದಲ್ಲಿ ಮತ್ತೊಮ್ಮೆ ಹರ್ಷ-ಶಿವಣ್ಣ ಜೋಡಿ ಒಂದಾಗುತ್ತಿದೆ. ಇದರ ಜೊತೆಗೆ ಯಶ್ ಅವರ ರಾಣಾ ಚಿತ್ರವೂ ಸುದ್ದಿಯಲ್ಲಿದೆ. ಮತ್ತೊಂದೆಡೆ ನಿಖಿಲ್ ಕುಮಾರ ಸ್ವಾಮಿ ಅಭಿನಯದ ಚಿತ್ರಕ್ಕೂ ಹರ್ಷ ನಿರ್ದೇಶಕ.
ಆದರೆ, ಈ ಮೂರು ಚಿತ್ರಗಳಲ್ಲಿ ಹರ್ಷ ಮೊದಲು ಕೈಗೆತ್ತಿಕೊಳ್ಳುತ್ತಿರುವುದು ನಿಖಿಲ್ ಕುಮಾರಸ್ವಾಮಿ ಚಿತ್ರವನ್ನು. ಡಿಸೆಂಬರ್ ಮೊದಲ ವಾರದಿಂದ ನಿಖಿಲ್ ಚಿತ್ರ ಶುರುವಾಗಬಹುದು ಎಂದಿದ್ದಾರೆ ಹರ್ಷ.
ಸದ್ಯಕ್ಕೆ ಅಂಜನೀಪುತ್ರ ಚಿತ್ರದ ಬಿಡುಗಡೆ ಬ್ಯುಸಿಯಲ್ಲಿರುವ ಹರ್ಷ, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದಿದ್ದಾರೆ. ಫ್ಯಾಮಿಲಿ ಸೆಂಟಿಮೆಂಟ್, ಜಬರ್ದಸ್ತ್ ಆ್ಯಕ್ಷನ್ ಇರುವ ಚಿತ್ರ. ರಾಜಕುಮಾರದಂತಹ ಸೂಪರ್ ಹಿಟ್ ನಂತರ ಬರುತ್ತಿರುವ ಅಂಜನೀಪುತ್ರದ ಬಗ್ಗೆ ನಿರೀಕ್ಷೆಯೂ ದುಪ್ಪಟ್ಟಾಗಿದೆ. ಎಲ್ಲ ನಿರೀಕ್ಷೆಗಳಿಗೂ ಅಂಜನೀಪುತ್ರದಲ್ಲಿ ಸಂಭ್ರಮಿಸುವ ಉತ್ತರ ಸಿಗಲಿದೆಯಂತೆ.