` ಅಯೋಗ್ಯ... ಮತ್ತೆ ಮುಹೂರ್ತ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ayogya muhurtha again
Sathish Ninasam In Ayogya

ಒಂದೇ ಚಿತ್ರಕ್ಕೆ ಎರಡು ಬಾರಿ ಮುಹೂರ್ತವಾಗೋದು ಅಪರೂಪ. ಕಾರಣಗಳು ಏನೇ ಇರಲಿ, ಅಂಥಾದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ ಅಯೋಗ್ಯ. ಇತ್ತೀಚೆಗಷ್ಟೇ ಮುಹೂರ್ತ ಮಾಡಿಕೊಂಡಿದ್ದ ಅಯೋಗ್ಯ ಚಿತ್ರಕ್ಕೆ, ನವೆಂಬರ್ 27ರಂದು ಮತ್ತೊಮ್ಮೆ ಮುಹೂರ್ತ ನಡೆಯುತ್ತಿದೆ.

ಕಾರಣ ಇಷ್ಟೆ, ನಿರ್ಮಾಪಕರು ಬದಲಾಗಿದ್ದಾರೆ. ಮೊದಲು ನಿರ್ಮಾಪಕರಾಗಿದ್ದವರು ಸುರೇಶ್. ಅನಿವಾರ್ಯ ಕಾರಣಗಳಿಂದ ಚಿತ್ರದಿಂದ ಹೊರಬಂದಿದ್ದಾರೆ. ನಿರ್ಮಾಣದ ಹೊಣೆ ಈಗ ಟಿ.ಆರ್. ಚಂದ್ರಶೇಖರ್ ಹೆಗಲೇರಿದೆ. ಜಾನ್ ಸೀನ, ಚಮಕ್, ಬೀರ್‍ಬಲ್ ಚಿತ್ರಗಳ ನಿರ್ಮಾಣಕ್ಕೆ ಬಂಡವಾಳ ಹೂಡಿರುವ ಚಂದ್ರಶೇಖರ್, ಈಗ ಅಯೋಗ್ಯಕ್ಕೂ ನಿರ್ಮಾಪಕರಾಗುತ್ತಿದ್ದಾರೆ.

ಬದಲಾಗಿರುವುದು ನಿರ್ಮಾಪಕರು ಮಾತ್ರ. ನಾಯಕ ನೀನಾಸಂ ಸತೀಶ್, ನಾಯಕಿ ರಚಿತಾ ರಾಮ್, ನಿರ್ದೇಶಕ ಮಹೇಶ್ ಕುಮಾರ್.. ಸೇರಿದಂತೆ ಕಲಾವಿದರು, ತಂತ್ರಜ್ಞರೆಲ್ಲ ಅವರೇ. ಡಿಸೆಂಬರ್ 1ರಿಂದ ಚಿತ್ರೀಕರಣ ಶುರುವಾಗಲಿದೆ. ಒಂದೇ ಶೆಡ್ಯೂಲ್‍ನಲ್ಲಿ ಚಿತ್ರದ ಚಿತ್ರೀಕರಣ ಮುಗಿಸಲು ಚಿತ್ರತಂಡ ಯೋಜನೆ ರೂಪಿಸಿದೆ.