`ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ ಶುಭಾರಂಭಗೊಂಡಿದೆ. ಗುರುವಾರ ಬೆಳಗ್ಗೆ ಮುಂಜಾನೆ 5.45ರಿಂದ 6 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದವರು ಸುದೀಪ್ ಅವರ ತಾಯಿ ಸರೋಜ ಹಾಗೂ ಸಹೋದರಿ ಸುಜಾತ. ಕಿಚ್ಚ ಕ್ರಿಯೇಷನ್ಸ್ ಅರ್ಪಿಸುತ್ತಿರುವ ಚಿತ್ರಕ್ಕೆ ಸುದೀಪ್ ನಿರ್ಮಾಪಕರೂ ಹೌದು. ಸುದೀಪ್ ಜೊತೆ ಮಂಜುನಾಥ್ ಗೌಡ ಕೂಡಾ ನಿರ್ಮಾಪಕರು. ಕೆ.ಎಸ್.ಕೆ. ಶೋರೀಲ್ ಪ್ರೊಡಕ್ಷನ್ಸ್‍ನಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಗುರುದತ್ತ ಗಾಣಿಗ ನಿರ್ದೇಶಕ.
ಚಿತ್ರದ ಪ್ರಮುಖ ಪಾತ್ರಧಾರಿ ಅಂಬರೀಷ್. ಅಂಬರೀಷ್ ವಯಸ್ಸಾದ ವ್ಯಕ್ತಿಯಾಗಿ ಕಾಣಿಸಿಕೊಂಡರೆ, ಅವರು ಯುವಕರಾಗಿದ್ದಾಗಿನ ಪಾತ್ರ ಮಾಡುತ್ತಿರುವುದು ಕಿಚ್ಚ ಸುದೀಪ್. ಎರಡನೇ ಬಾರಿಗೆ ಸುದೀಪ್ ಅಂಬರೀಷ್ ಜೊತೆ ನಟಿಸುತ್ತಿರುವುದು ವಿಶೇಷ. ಅಂಬರೀಷ್‍ಗೆ ಜೋಡಿಯಾಗಿ ಸುಹಾಸಿನಿ ನಟಿಸುತ್ತಿದ್ದಾರೆ. ಚಿತ್ರದ ಇನ್ನಷ್ಟು ಕುತೂಹಲಕಾರಿ ಅಂಶಗಳು ಹೊರಬೀಳಲಿವೆ.