ಅತಿರಥ ಚಿತ್ರದಲ್ಲಿರುವ ಕಥೆ ಏನು..? ಈ ಕುತೂಹಲಕ್ಕೆ ಉತ್ತರ ಇಲ್ಲಿದೆ. ಚಿತ್ರದಲ್ಲಿ ನಕಲಿ ಪ್ರಮಾಣಪತ್ರಗಳ ಹಾವಳಿಯ ಕುರಿತ ಕಥೆಯಿದೆ. ಅದರಲ್ಲೂ ಡಿಗ್ರಿ ಹಂತದಲ್ಲಿ ನಡೆಯುವ ನಕಲಿ ಸರ್ಟಿಫಿಕೇಟ್‍ಗಳು ಹೇಗೆಲ್ಲ ಸಮಾಜವನ್ನು ಹಾಳು ಮಾಡುತ್ತಿವೆ ಎಂಬ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ.
ಚಿತ್ರದಲ್ಲಿ ನಡೆಯುವ ಮೈಂಡ್‍ಗೇಮ್ ಇಂಟ್ರೆಸ್ಟಿಂಗ್ ಎಂದು ಹೇಳಿಕೊಂಡಿದ್ದಾರೆ ನಟ ಚೇತನ್. ಮಹೇಶ್ ಬಾಬು ನಿರ್ದೇಶನದ ಸಿನಿಮಾಗಳಲ್ಲಿ ಮನಮಿಡಿಯುವ ದೃಶ್ಯಗಳನ್ನು ಸೊಗಸಾಗಿ ಕಟ್ಟಿಕೊಡ್ತಾರೆ ಎನ್ನುವ ಚೇತನ್, ಈ ಚಿತ್ರದಲ್ಲೂ ಅಂತಹ ದೃಶ್ಯಗಳು ಚಿತ್ರದ ಹೈಲೈಟ್ ಎಂದಿದ್ದಾರೆ.
ಚಿತ್ರ ಥಿಯೇಟರ್‍ನಲ್ಲಿದೆ. ಹೋರಾಟದ ಮನೋಭಾವ ಇರುವವರಿಗೆ ಚಿತ್ರ ಖಂಡಿತಾ ಇಷ್ಟವಾಗುತ್ತೆ ಎನ್ನುವುದು ಚೇತನ್ ನೀಡುತ್ತಿರುವ ಭರವಸೆ. ಅಂದಹಾಗೆ ಚಿತ್ರದಲ್ಲಿ ಚೇತನ್ ಅವರದ್ದು ಟಿವಿ ಜರ್ನಲಿಸ್ಟ್ ಪಾತ್ರ.