` `ಕವಚ'ಧಾರಿಯಾಗಲಿದ್ದಾರೆ ಶಿವರಾಜ್ ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Kavacha Image
shivarajkumar Kavacha

ಕವಚ, ಇದು ಶಿವರಾಜ್ ಕುಮಾರ್ ಅಭಿನಯದ ಹೊಸ ಚಿತ್ರ. ಅಂದಹಾಗೆ 15 ವರ್ಷಗಳ ಬಳಿಕ ಶಿವರಾಜ್ ಕುಮಾರ್ ನಟಿಸುತ್ತಿರುವ ರೀಮೇಕ್ ಚಿತ್ರವೂ ಹೌದು. ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಇದು ಮಲಯಾಳಂನ ಒಪ್ಪಂ ಚಿತ್ರದ ರೀಮೇಕ್. ಕಥೆಯೇ ಚಿತ್ರದ ಹೀರೋ. ಜಿವಿಆರ್ ವಾಸು ಚಿತ್ರದ ನಿರ್ದೆಶಕ. ಎಚ್.ಎಂ.ಎ. ಬ್ಯಾನರ್‍ನಲ್ಲಿ ಎಂವಿ.ವಿ. ಸತ್ಯನಾರಾಯಣ ಹಾಗೂ ಎ.ಸಂಪತ್ ಕುಮಾರ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದಲ್ಲಿ ಇಶಾ ಕೊಪ್ಪಿಕರ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಶಾ ಕೊಪ್ಪಿಕರ್‍ಗೂ ಇದು ಕನ್ನಡದಲ್ಲಿ ಸುದೀರ್ಘ ವಿರಾಮದ ನಂತರ ಕಾಣಿಸಿಕೊಳ್ಳುತ್ತಿರುವ ಚಿತ್ರ. 

ರವಿ ಕಾಳೆ, ತಬಲಾ ನಾಣಿ, ವಸಿಷ್ಟ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮೊದಲಾದವರು ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿರುವ ಚಿತ್ರಕ್ಕೆ ನಾಳೆ ಚಾಲನೆ ಸಿಗಲಿದೆ.

Phailwaan Audio Release Gallery

Rightbanner02_gimmick_inside

Nanna Prakara Audio Release Images