ಅತಿರಥ.. ವಿಭಿನ್ನ ಟೈಟಲ್‍ನಿಂದಲೇ ಕುತೂಹಲ ಮೂಡಿಸಿರುವ ಅತಿರಥ, ಚೇತನ್ ಅಭಿನಯದ ಚಿತ್ರ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಲವ್, ರೊಮ್ಯಾನ್ಸ್ ಎಲ್ಲವೂ ಇದೆ. ಆದರೆ, ಇಡೀ ಚಿತ್ರದ ಹೈಲೈಟ್ಸ್ ಥ್ರಿಲ್.
ಸಿನಿಮಾ ನೋಡುವ ಪ್ರೇಕ್ಷಕ ಕ್ಷಣ ಕ್ಷಣವೂ ರೋಮಾಂಚಿತನಾಗುತ್ತಾ ಹೋಗುತ್ತಾನೆ. ಚಿತ್ರದುದ್ದಕ್ಕೂ ಸಣ್ಣ ಸಣ್ಣ ಶಾಕ್ ಟರ್ನಿಂಗ್‍ಗಳಿವೆ. ಚಿತ್ರದ ಹೀರೋ ತನಗೇ ಗೊತ್ತಿಲ್ಲದೆ ಸಮಸ್ಯೆಗೆ ಸಿಲುಕಿಕೊಂಡು ಒದ್ದಾಡುವ ಹಾಗೂ ಅದರಿಂದ ಹೊರಬರುವ ಕಥೆ ಚಿತ್ರದಲ್ಲಿದೆ.
ಆತ ಯಾವ ಸಮಸ್ಯೆಗೆ ಸಿಕ್ಕಿಕೊಳ್ತಾನೆ..ಹೇಗೆ ಹೊರಬರ್ತಾನೆ.. ಅದನ್ನೆಲ್ಲ ತಿಳಿದುಕೊಳ್ಳಬೇಕೆಂದರೆ, ಸಿನಿಮಾ ಥಿಯೇಟರ್‍ಗೇ ಹೋಗಬೇಕು.