ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೊನೆಗೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅದು ಕನಕಪುರ ಶ್ರೀನಿವಾಸ್ ವಿರುದ್ಧ. ಕನಕಪುರ ಶ್ರೀನಿವಾಸ್, ಭಟ್ ನಿರ್ದೇಶನದ ದನಕಾಯೋನು ಚಿತ್ರದ ನಿರ್ಮಾಪಕರಾಗಿದ್ದವರು. ಆದರೆ, ಚಿತ್ರಕ್ಕೆ ಕೊಡಬೇಕಾದ ಸಂಭಾವನೆಯನ್ನು ಕೊಟ್ಟಿರಲಿಲ್ಲ. ಈ ಕುರಿತು ಫಿಲಂ ಚೇಂಬರ್ನಲ್ಲಿ ಹಲವು ಬಾರಿ ತೀರ್ಮಾನವಾದರೂ, ಶ್ರೀನಿವಾಸ್ ಚೇಂಬರ್ ನಿರ್ಧಾರಕ್ಕೂ ಬೆಲೆ ಕೊಟ್ಟಿರಲಿಲ್ಲ.
ಭರ್ಜರಿ ಚಿತ್ರ ರಿಲೀಸ್ ವೇಳೆ ಯೋಗರಾಜ್ ಭಟ್, ಕೋರ್ಟ್ ಮೆಟ್ಟಿಲೇರುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಕನ್ನಡ ಚಿತ್ರವೊಂದಕ್ಕೆ ಇದು ಅಡ್ಡಿಯಾಗಬಾರದೆಂದು ಚೇಂಬರ್ ಮಧ್ಯಪ್ರವೇಶಿಸಿತ್ತು. ಭಟ್ಟರೂ ಕೂಡಾ ಭರ್ಜರಿ ಚಿತ್ರಕ್ಕೆ ತೊಂದರೆಯಾಗದಂತೆ ನಡೆದುಕೊಂಡಿದ್ದರು.
ಈಗ, ಭರ್ಜರಿ ರಿಲೀಸ್ ಆಗಿ, ಆ ಚಿತ್ರವೂ ಹಿಟ್ ಆಗಿದೆ. ಆದರೆ, ಚೇಂಬರ್ ಮಧ್ಯಸ್ಥಿಕೆಯಲ್ಲಿ ನೀಡಿದ್ದ ಮೂರು ಚೆಕ್ಗಳು ಬೌನ್ಸ್ ಆಗಿವೆ. ಹೀಗಾಗಿ ಯೋಗರಾಜ್ ಭಟ್, ತಮಗೆ ಬರಬೇಕಾದ 23 ಲಕ್ಷ ಬಾಕಿ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮಗೆ ಬರಬೇಕಾದ ಸಂಭಾವನೆಯಲ್ಲೂ ಕಡಿತ ಮಾಡಿಕೊಂಡು ರಾಜಿ ಮಾಡಿಕೊಂಡಿದ್ದ ಭಟ್ಟರಿಗೆ, ಈಗ ಆ ಹಣವೂ ಸಿಕ್ಕಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ ಎಂದು ಯೋಗರಾಜ್ ಭಟ್ ತಿಳಿಸಿದ್ದಾರೆ.