ಚೇತನ್. ಆ ದಿನಗಳು ಮೂಲಕ ಬೆಳಕಿಗೆ ಬಂದ ಚೇತನ್, ನಂತರ ಮಿಂಚಿದ್ದು ಮೈನಾ ಚಿತ್ರದಲ್ಲಿಯೇ. ಸಿನಿಮಾಗಳಿಗಿಂತ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿಯೇ ತೊಡಗಿಕೊಳ್ಳುವ ಚೇತನ್, ಈಗ ಪತ್ರಕರ್ತರಾಗಿದ್ದಾರೆ.
ರಿಯಲ್ ಆಗಿ ಅಲ್ಲ, ರೀಲ್ ಲೈಫ್‍ನಲ್ಲಿ. ಅತಿರಥ ಚಿತ್ರದಲ್ಲಿ ಚೇತನ್ ಅವರದ್ದು ಪತ್ರಕರ್ತನ ಪಾತ್ರ. ಶಿಕ್ಷಣ ಕ್ಷೇತ್ರದ ಹುಳುಕುಗಳನ್ನು ಹೊರತೆಗೆಯುವ ಆ್ಯಂಗ್ರಿಯಂಗ್ ಮ್ಯಾನ್ ಪಾತ್ರ ಚೇತನ್ ಅವರದ್ದು. `ಮೀಡಿಯಾ ಅಂದ್ರೆ ಬರೀ ಕಾಂಟ್ರವರ್ಸಿ, ಟಿಆರ್‍ಪಿ, ಪಬ್ಲಿಸಿಟಿ ಅಲ್ಲ, ಇಟ್ಸ್ ಎ ಸೋರ್ಸ್ ಆಫ್ ರೆಸ್ಪಾನ್ಸಿಬಿಲಿಟಿ' ಅನ್ನೋ ಸಂದೇಶ ಹೇಳಲಿದ್ದಾರೆ ಚೇತನ್.
ಇವೆಲ್ಲದರ ಜೊತೆ ಚಿತ್ರದಲ್ಲಿ ಥ್ರಿಲ್ಲರ್ ಹಾಗೂ ಆ್ಯಕ್ಷನ್ ದೃಶ್ಯಗಳಿವೆಯಂತೆ. ಲತಾ ಹೆಗಡೆ ಎಂಬ ಬಳುಕುವ ಬಳ್ಳಿ ಚಿತ್ರಕ್ಕೆ ನಾಯಕಿ.
ಆಕಾಶ್, ಅರಸು ಖ್ಯಾತಿಯ ಮಹೇಶ್ ಬಾಬು ನಿರ್ದೇಶನದ ಚಿತ್ರ ಅತಿರಥ. ಹೀಗಾಗಿಯೇ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.