ಅತಿರಥ, ಚೇತನ್ ಅಭಿನಯದ ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಮಹೇಶ್ ಬಾಬು ನಿರ್ದೇಶಕ. ಪ್ರೇಮ್, ಡಾ.ವೇಣು ಗೋಪಾಲ್, ಗಂಡಸಿ ಮಂಜುನಾಥ್ ನಿರ್ಮಾಪಕರು. ಆದರೆ, ಚಿತ್ರದ ಬಗ್ಗೆ ಎಲ್ಲರಿಗಿಂತ ಹೆಚ್ಚು ಟೆನ್ಷನ್ ಸಾಧು ಕೋಕಿಲ ಅವರಿಗೆ ಇದೆ.
ಚಿತ್ರದಲ್ಲಿ ಸಾಧು ಅವರದ್ದು ಪುಟ್ಟ ಪಾತ್ರ. ಅದು ಕಾಮಿಡಿ ಎಂದು ಬೇರೆ ಹೇಳಬೇಕಿಲ್ಲ. ಆದರೂ ಅವರಿಗೆ ಚಿತ್ರ ಸಕ್ಸಸ್ ಆಗಬೇಕೆಂಬ ಟೆನ್ಷನ್ ಇದೆ. ಅದಕ್ಕೆ ಕಾರಣ, ಅವರ ಮಗ ಸುರಾಗ್.
ಅತಿರಥ ಚಿತ್ರ ಸುರಾಗ್ ಸಂಗೀತ ನೀಡಿರುವ ಮೊದಲ ಚಿತ್ರ. ಹೀಗಾಗಿ ಮಗನ ಸಂಗೀತ ನಿರ್ದೇಶನದ ಮೊದಲ ಚಿತ್ರದ ಕುರಿತು ಸಹಜವಾಗಿಯೇ ತಂದೆಯಾಗಿ ಸಾಧುಕೋಕಿಲ ಅವರಿಗೆ ಆತಂಕ ಇದ್ದೇ ಇದೆ. ಅಂದಹಾಗೆ ಅತಿರಥ ಎಂದರೆ, ಏಕಕಾಲದಲ್ಲಿ 60 ಸಾವಿರ ಸೈನಿಕರನ್ನು ಎದುರಿಸುವ ಮಹಾವೀರ ಎಂದರ್ಥ.