ರಾಕಿಂಗ್ ಸ್ಟಾರ್ ಯಶ್, ವಿಷ್ಣುವರ್ಧನ್ ಅವರ ಅಭಿಮಾನಿ ಎನ್ನುವುದು ಗುಟ್ಟೇನಲ್ಲ. ಯಶ್ ಚಿತ್ರಜೀವನದ ಮೈಲುಗಲ್ಲು ಎಂದೇ ಪರಿಗಣಿತವಾಗುವ ರಾಮಾಚಾರಿ ಚಿತ್ರದಲ್ಲಿ ಯಶ್, ವಿಷ್ಣು ಅಭಿಮಾನಿಯಾಗಿಯೇ ಮಿಂಚಿದ್ದರು. ಈಗ ಯಶ್, ವಿಷ್ಣು ಅವರಿಗೆ ಸರ್ಕಾರ ಕೊಡಬೇಕಾದ ಗೌರವ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಷ್ಣುವರ್ಧನ್ ಅವರ ಅಳಿಯ ರಾಜಾಸಿಂಹ ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿದ್ದ ಯಶ್, ಸರ್ಕಾರ ವಿಷ್ಣು ಅವರಿಗೆ ಕೊಡಬೇಕಾದ ಗೌರವ ಕೊಡುತ್ತಿಲ್ಲ. ಈ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಬೇಕು. ಇಲ್ಲದೇ ಹೋದರೆ, ಅಭಿಮಾನಿಗಳಾದ ನಾವೇ ಅದನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ. ಯಶ್ ಅವರ ಮಾತಿನಲ್ಲಿ ಮನವಿಯಷ್ಟೇ ಇರಲಿಲ್ಲ, ಎಚ್ಚರಿಕೆಯೂ ಇತ್ತು ಎಂಬುದನ್ನು ಮರೆಯುವಂತಿಲ್ಲ.