ಅತಿರಥ.. ಅದು ಲತಾ ಹೆಗಡೆ ಅವರ ಮೊದಲ ಸಿನಿಮಾ. ಕನ್ನಡತಿಯಾದರೂ ಓದಿದ್ದು, ಬೆಳೆದಿದ್ದು ನ್ಯೂಜಿಲೆಂಡ್‍ನಲ್ಲಿ. ಆದರೆ, ಕನ್ನಡದಲ್ಲಿಯೇ ಹೆಸರು ಮಾಡಬೇಕು ಎಂದು ಕನಸು ಕಂಡಿದ್ದ ಹುಡುಗಿ ಆಯ್ಕೆ ಮಾಡಿಕೊಂಡಿದ್ದು ಚಿತ್ರರಂಗವನ್ನು. ಈಗ ಅವರು ನಟಿಸಿರುವ ಅತಿರಥ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ವಿಶೇಷವೆಂದರೆ, ಹೊಸ ನಾಯಕಿಯರ ಹೆಸರು ಕೇಳಿಬಂದಾಗಲೆಲ್ಲ ಲತಾ ಹೆಗಡೆ ಹೆಸರು ಕೇಳಿಬರುತ್ತಲೇ ಇತ್ತು. ಮಹೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಅಭಿನಯಕ್ಕೂ ಪ್ರಾಧಾನ್ಯತೆ ಇದೆ ಎಂಬ ಕಾರಣಕ್ಕೇ ಈ ಚಿತ್ರ ಒಪ್ಪಿಕೊಂಡೆ ಎಂದಿದ್ದಾರೆ ಲತಾ ಹೆಗಡೆ. ಇದಾದ ನಂತರ ಸಾಕಷ್ಟು ಡಿಮ್ಯಾಂಡ್ ಇದ್ದರೂ, ಲತಾ ಒಪ್ಪಿಕೊಂಡಿರುವುದು ಅನಂತು v/s ನುಸ್ರತ್ ಚಿತ್ರವನ್ನು ಮಾತ್ರ.
ಚೇತನ್ ಎದುರು ಮುದ್ದು ಮುದ್ದಾಗಿ ಕಾಣುವ ಲತಾ, ಅತಿರಥ ಚಿತ್ರದಿಂದ ದೊಡ್ಡ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ.
Related Articles :-
Athiratha Based On Real Incidents
Athiratha Censored – Releasing on 24th