` ಮತ್ತೆ ದಾಖಲೆ ಬರೆದೈತೆ.. ಬೊಂಬೆ ಹೇಳುತೈತೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
raajakumara breaks another another record
Raajakumara New Record

ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ.. ಹಾಡು ಮತ್ತೆ ಮತ್ತೆ ದಾಖಲೆ ಬರೆಯುತ್ತಲೇ ಇರುತ್ತಲೇ ಇದೆ. ಸಿನಿಮಾ ರಿಲೀಸ್ ಆದ 8 ತಿಂಗಳಲ್ಲಿ ಯೂಟ್ಯೂಬ್‍ನಲ್ಲಿ ಬೊಂಬೆ ಹೇಳುತೈತೆ ಹಾಡು 40 ಮಿಲಿಯನ್‍ಗೂ ಹೆಚ್ಚು ಹಿಟ್ಸ್ ಪಡೆದಿರುವುದು ದಾಖಲೆ.

ಈ ಸಂಭ್ರಮವನ್ನು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಖುಷಿಯಿಂದ ಹಂಚಿಕೊಂಡಿದ್ದಾರೆ. ಇದು ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವ ವಿಷಯ ಎಂದು ಸಂಭ್ರಮಿಸಿದ್ದಾರೆ. 

ಬೊಂಬೆ ಹೇಳುತೈತೆ ಹಾಡು ಬರೆದ ದಾಖಲೆಗಳು ಒಂದೆರೆಡಲ್ಲ. ಆ ಹಾಡು ಬೆಳಗಾವಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಕೂಡಾ ಬಳಕೆಯಾಗಿತ್ತು. ಇದು ಜನಾಭಿಮಾನದ ದಾಖಲೆ ಎಂದು ಸಂಭ್ರಮವನ್ನಾಚರಿಸುತ್ತಿದೆ ರಾಜಕುಮಾರನ ಬಳಗ.