` ಕಿಚ್ಚನ್ ಕಿಚನ್‍ನಲ್ಲಿ ಖುಷಿಖುಷಿಯಾದ ಕಿಚ್ಚ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kicchana kitchen with gundappa vishwanath
Kichcha's Kitchen

ಕಿಚ್ಚ ಸುದೀಪ್ ಬಿಗ್‍ಬಾಸ್ ವೀಕೆಂಡ್‍ನಲ್ಲಿ ಕಿಚ್ಚನ್ ಕಿಚನ್ ಶೋ ಕೂಡಾ ಮಾಡ್ತಾರೆ. ಅದು ಬಿಗ್‍ಬಾಸ್ ನಿರೂಪಣೆಯ ಒಂದು ಭಾಗ. ಈ ವಾರದ ಕಿಚ್ಚನ್ ಕಿಚನ್‍ನಲ್ಲಿ ಸ್ವತಃ ಸುದೀಪ್ ಥ್ರಿಲ್ ಆಗುವಂತಾ ಅತಿಥಿಯೊಬ್ಬರು ಬಂದಿದ್ದರು.

ಭಾರತೀಯ ಕ್ರಿಕೆಟ್ ಕಂಡ ಕ್ರಿಕೆಟ್ ಕಲಾವಿದ ಜಿ.ಆರ್.ವಿಶ್ವನಾಥ್ ಅವರ ಆಗಮನ ಸುದೀಪ್ ಅವರ ಖುಷಿಯನ್ನು ಹೆಚ್ಚಿಸಿತ್ತು. ಗುಂಡಪ್ಪ ವಿಶ್ವನಾಥ್ ಅವರ ಬ್ಯಾಟಿಂಗ್ ನೋಡಿದವರು ಅವರನ್ನು ಆಟಗಾರ ಎನ್ನುವ ಬದಲಿಗೆ ಕ್ರಿಕೆಟ್ ಕಲಾವಿದ ಎಂದೇ ಬಣ್ಣಿಸುತ್ತಾರೆ. ಅದೊಂದು ರೀತಿ ಕ್ರಿಕೆಟ್ ಕಲಾವಿದ ಹಾಗೂ ಚಿತ್ರರಂಗದ ಕಲಾವಿದರ ಸಮ್ಮಿಲನವಾಗಿತ್ತು. 

ಇಬ್ಬರೂ ಕಲಾವಿದರ ಮಧ್ಯೆ ಶೃತಿ ಹರಿಹರನ್ ಮಿನುಗಲೆ ಮಿನುಗಲೆ ನಕ್ಷತ್ರ ಎಂಬಂತೆ ಮಿಂಚುತ್ತಿದ್ದರು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery