ನಟ ಜಗ್ಗೇಶ್, ಅದ್ಭುತ ಕಲಾವಿದರಷ್ಟೇ ಅಲ್ಲ, ಒಳ್ಳೆಯ ಗಾಯಕರೂ ಹೌದು. ಕಂಠವನ್ನು ಇಂದಿಗೂ ಶುದ್ಧವಾಗಿಟ್ಟುಕೊಂಡಿರವ ಜಗ್ಗೇಶ್, ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿಲ್ಲವಾದರೂ, ಅದ್ಭುತವಾಗಿ ಹಾಡುತ್ತಾರೆ. ಹೊಸಬರಿಗೆ ಪ್ರೋತ್ಸಾಹಿಸುವವರ ಹಾದಿಯಲ್ಲಿ ಸದಾ ಮುಂದಿರುವ ಜಗ್ಗೇಶ್, ಈಗ ಹೊಸಬರಿಗಾಗಿ ಗಾಯಕರೂ ಆಗಿದ್ದಾರೆ.
ಡೇಸ್ ಆಫ್ ಬೋರಾಪುರ ಚಿತ್ರದ ರೆಟ್ರೋ ಶೈಲಿಯ ಹಾಡಿಗೆ ದನಿಕೊಟ್ಟಿದ್ದಾರೆ ಜಗ್ಗೇಶ್. ಸ್ನೇಹ ಒಂಥರಾ.. ನಿಂಬೆ ಹುಳಿ ಪೆಪ್ಪರ್ಮೆಂಟ್ ಅನ್ನೋ ಹಾಡು ಕೇಳೋಕೂ ಮಜಬೂತಾಗಿದೆ. ಜೊತೆಗೆ ಜಗ್ಗಣ್ಣನ ವಾಯ್ಸ್ ಬೇರೆ.
ಒಂದಷ್ಟು ಸಾಫ್ಟ್ವೇರ್ ಹುಡುಗರು ಒಟ್ಟಿಗೇ ಸೇರಿಕೊಂಡು ಮಾಡುತ್ತಿರುವ ವಿಭಿನ್ನ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ ಜಗ್ಗೇಶ್.