ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕುಟುಂಬ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್ ಎಂಬ ಪ್ರೊಡಕ್ಷನ್ ಹೌಸ್ ಶುರು ಮಾಡುತ್ತಿದ್ಧಾರೆ. ನಾಳೆ ಕಂಠೀರವ ಸ್ಟುಡಿಯೋದಲ್ಲಿ ಶಿವರಾಜ್ ಕುಮಾರ್ ಅವರ ಹೊಸ ಪ್ರೊಡಕ್ಷನ್ ಹೌಸ್ ಉದ್ಘಾಟನೆಯಾಗಲಿದೆ.
ಗೀತಾ ಶಿವರಾಜ್ ಕುಮಾರ್ ಚಿತ್ರರಂಗದಲ್ಲಿ ಹಲವು ರಂಗದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ. ಪ್ರೊಡಕ್ಷನ್ ಹೌಸ್ ಹೊಸ ಸಾಹಸ. ಪುನೀತ್ ರಾಜ್‍ಕುಮಾರ್ ಇತ್ತೀಚೆಗಷ್ಟೇ ಹೊಸ ಬ್ಯಾನರ್ ಶುರು ಮಾಡಿದ್ದರು. ಶಿವರಾಜ್ ಕುಮಾರ್ ಪ್ರೊಡಕ್ಷನ್ ಹೌಸ್ ಶುರು ಮಾಡುತ್ತಿದ್ದಾರೆ. ಇದರ ಮಧ್ಯೆ ಕುಟುಂಬದ ಹಳೆಯ ಸಂಸ್ಥೆಗಳಾದ ವಜ್ರೇಶ್ವರಿ ಸಂಸ್ಥೆ ಎಂದಿನಂತೆಯೇ ಮುಂದುವರೆಯುತ್ತೆ.