` ಪದ್ಮಾವತಿಗೆ ಕರ್ನಾಟಕದಲ್ಲಿ ನಿಷೇಧ ಇಲ್ಲ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
deepika padukone in padmavathi
Padmavathi Movie Image

ಪದ್ಮಾವತಿ, ರಜಪೂತ ರಾಣಿಯ ಕುರಿತಾದ ಈ ಸಿನಿಮಾ ವಿರುದ್ಧ ರಜಪೂತ ಸಮುದಾಯ ರೊಚ್ಚಿಗೆದ್ದು ನಿಂತಿದೆ. ಚಿತ್ರದಲ್ಲಿ ಪದ್ಮಾವತಿ ಪಾತ್ರವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎನ್ನುವುದು ರಜಪೂತರ ದೂರು. ಇದೇ ವಿಷಯ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್‍ನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

ಪದ್ಮಾವತಿ ರಜಪೂತ ವಂಶದ ರಾಣಿ. ವೀರ ಪರಂಪರ ಪ್ರತಿನಿಧಿಸುವ ಪದ್ಮಾವತಿ, ರಾಷ್ಟ್ರಭಕ್ತಿಯ ಸಂಕೇತ. ಆದರೆ, ಚಿತ್ರದಲ್ಲಿ ಆಕೆಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಕೀಳುಮಟ್ಟದಲ್ಲಿ ಚಿತ್ರಿಸಿ ಕೋಟ್ಯಂತರ ಜನರ ಭಾವನೆಗೆ ಘಾಸಿ ಮಾಡಲಾಗಿದೆ ಎಂದರು ಲೆಹರ್ ಸಿಂಗ್. ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಚಿತ್ರವನ್ನು ನಿಷೇಧಿಸುವ ಅಧಿಕಾರ ನಮಗಿಲ್ಲ. ಸೆನ್ಸಾರ್ ಮಂಡಳಿ ತೀರ್ಮಾನವೇ ಅಂತಿಮ. ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Related Articles :-

ಪದ್ಮಾವತಿ ವಿರುದ್ಧ ಬೆಂಗಳೂರಿನಲ್ಲೂ ಕಿಚ್ಚು

#

Tagaru Movie Gallery

Prema Baraha Success Meet Gallery