ಅನುಶ್ರೀ, ಕಿರುತೆರೆಯಲ್ಲಿ ಮಾತಿನ ಮಲ್ಲಿ. ಟಿವಿ ಪರದೆ ಮೇಲೆ ಕಾಣಿಸಿಕೊಂಡರೆ, ಪಟಾಕಿ ಸಿಡಿದಂತೆ ಸಿಡಿಯುತ್ತಲೇ ಇರುವ ಚಿನಕುರುಳಿ. ಇಷ್ಟು ದಿನ ಅನುಶ್ರೀ ಎಂದರೆ ಪಟ್ ಪಟ್ ಪಟಾಕಿ ಹುಡುಗಿ ಎಂದುಕೊಂಡಿದ್ದವರು, ಈಗ ರೋ.. ರೋ.. ರೋಮಿಯೋ ಹಾಡು ನೋಡಿ ಅನುಶ್ರೀ ಹಿಂಗೆಲ್ಲ ಕುಣಿತಾರಾ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಕಿರುತೆರೆಯಲ್ಲಿಯೇ ಬ್ಯುಸಿ ಆಗಿರುವ ಅನುಶ್ರೀಗೆ, ಅವರ ಕ್ಯಾರೆಕ್ಟರ್‍ಗೆ ತಕ್ಕಂತ ಪಾತ್ರ ಸೃಷ್ಟಿಸಿದ್ದಾರಂತೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಅದು ನಾಯಕನಿಗೆ ಸ್ಫೂರ್ತಿ ತುಂಬುವ ಪಾತ್ರ ಎಂದು ಹೇಳಿಕೊಂಡಿದ್ದಾರೆ ಅನುಶ್ರೀ. ಈ ಡ್ಯಾನ್ಸ್ ನೋಡಿದವರು, ತುಂಬಾ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಡಂತೂ ವೈರಲ್ ಆಗಿರುವ ಬಗ್ಗೆ ಖುಷಿಯಿಂದೆ ಎಂದು ಸಂತಸ ಹಂಚಿಕೊಂಡಿದ್ದಾರೆ ಅನುಶ್ರೀ.