ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ `ದಿ ವಿಲನ್' ಚಿತ್ರಕ್ಕೆ ಹೊಸ ವಿಲನ್ ಸೃಷ್ಟಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಅದ್ದೂರಿ ಚಿತ್ರಕೆಕ ವಿಲನ್ ಆಗಿರೋದು ಭಾರತೀಯ ವಿದೇಶಾಂಗ ಇಲಾಖೆ ಮತ್ತು ರಜಿನಿ ಅಭಿನಯದ ರೋಬೋ 2.0 ಚಿತ್ರ.
ಆ್ಯಮಿ ಜಾಕ್ಸನ್ಗೆ ವೀಸಾ ಸಿಗುತ್ತಿಲ್ಲ. ಹೀಗಾಗಿ ಸುದೀಪ್ ಅವರ ಇಂಟ್ರೊಡಕ್ಷನ್ ಸಾಂಗ್ನ ಶೂಟಿಂಗ್ನಿಂದ ಆ್ಯಮಿ ದೂರವೇ ಉಳಿಯುವಂತಾಗಿದೆ. ಶೂಟಿಂಗ್ ಕೂಡಾ ಸಮಸ್ಯೆಯಾಗಿದೆ. ಇದರ ಜೊತೆಗೆ ರೋಬೋ 2.0 ಚಿತ್ರ ವಿಳಂಬವಾಗುತ್ತಿದ್ದು, ಡೇಟ್ ಕ್ಲಾಷ್ ಆಗುತ್ತಿದೆ.
ಈಗ ಪ್ರೇಮ್ಗೆ ಆಗಿರುವ ಸಮಸ್ಯೆಯೆಂದರೆ, ಆ್ಯಮಿ ಡೇಟ್ಸ್ಗೆ ಉಳಿದವರ ಡೇಟ್ಸ್ ಹೊಂದಿಸುವುದು. ಆದರೆ, ಚಿತ್ರದಲ್ಲಿ ನಟಿಸುತ್ತಿರುವ ಶಿವಣ್ಣ ಹಾಗೂ ಸುದೀಪ್, ಆ್ಯಮಿಗಿಂತಾ ಬ್ಯುಸಿ. ಪ್ರೇಮ್ ತಲೆ ಕಾದಹೆಂಚಿನಂತಾಗಿರುವುದಂತೂ ನಿಜ.