ಪ್ರೇಮಲೋಕ, ರವಿಚಂದ್ರನ್ ಅವರ ಸಿನಿಮಾ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದ ಸಿನಿಮಾ. ಆದರೆ, ಆ ಸಿನಿಮಾ ಅಂದ್ರೆ, ಸಿನಿಮಾದ ಟೈಟಲ್ ಅವರದ್ದಲ್ಲವಂತೆ. ಅದನ್ನು ಸ್ವತಃ ರವಿಚಂದ್ರನ್ ಹೇಳಿಕೊಂಡಿದ್ದಾರೆ.
ಅವರ ಜೊತೆ ಡೈಲಾಗ್ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಸೋಮು ಎಂಬುವರು ಕೊಟ್ಟ ಟೈಟಲ್ ಪ್ರೇಮಲೋಕ. ಅವರು ತಮ್ಮ ಚಿತ್ರಕ್ಕೆ ನಾ ನಿನ್ನ ಪ್ರೀತಿಸುವೆ ಹಾಗೂ ಪ್ರೇಮಲೋಕ ಎಂಬ ಎರಡು ಟೈಟಲ್ ತಂದು ಮುಂದಿಟ್ಟರಂತೆ. ರವಿಚಂದ್ರನ್, ಅವುಗಳಲ್ಲಿ ಪ್ರೇಮಲೋಕವನ್ನು ರಿಜಿಸ್ಟರ್ ಮಾಡಿಸಿದ್ರಂತೆ. ಸೋಮು ನಾ ನಿನ್ನ ಪ್ರೀತಿಸುವೆ ಟೈಟಲ್ ರಿಜಿಸ್ಟರ್ ಮಾಡಿಸಿದ್ರಂತೆ.
ಅಷ್ಟೇ ಅಲ್ಲ, ಚಿತ್ರಕ್ಕೆ ಮೊದಲು ನಿರ್ಮಾಪಕರಾಗಿದ್ದವರು ಕೆಸಿಎನ್ ಚಂದ್ರಶೇಖರ್.ಆದರೆ ಚಿತ್ರದ ಬಜೆಟ್ 60 ಲಕ್ಷ ಎಂಬುದನ್ನು ಕೇಳಿ ಅವರು ಅದನ್ನು ಕೈಬಿಟ್ಟರು. ನಂತರ ಅದು ಕೆಸಿಎನ್ ಪ್ರೊಡಕ್ಷನ್ಸ್ನಿಂದ ನಮಗೆ ಬಂತು. ನಂತರ ಸೃಷ್ಟಿಯಾಗಿದ್ದೇ ಪ್ರೇಮಲೋಕ. ಮುಂದಿನದ್ದು ಇತಿಹಾಸ.