` ನಾನು ಗರ್ಭಿಣಿ ನಾನು ಹೆಂಗಸಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
i am pregnant
I Am Pregnant But Not Female Movie Launch

ಹೆಂಗಸಲ್ಲವಂತೆ.. ಗರ್ಭಿಣಿಯಂತೆ.. ಏನ್ರೀ ಇದು ತಲೆಗೆ ಹುಳಾ ಬಿಡಾಕ್ ಹತ್ತೀರೇನ್ ನೀವು.. ಅಂತಾ ಕೇಳೋಕೇ ಬರಬೇಡಿ. ಚಿತ್ರದ ಟೈಟಲ್‍ನಷ್ಟೇ ಇಷ್ಟೆಲ್ಲ ಕುತೂಹಲವಿದೆ. 

`ಐ ಯಾಮ್ ಪ್ರೆಗ್ನೆಂಟ್' ಅನ್ನೋದು ಚಿತ್ರದ ಟೈಟಲ್. ಬಟ್ ಐ ಯಾಮ್ ನಾಟ್ ಎ ಫೀಮೇಲ್ ಅನ್ನೋದು ಟ್ಯಾಗ್‍ಲೈನ್. ಇಂಥಾದ್ದೊಂದು ಪ್ರಯೋಗಕ್ಕೆ ಕೈ ಹಾಕಿರೋದು ಸಂಜಯ್ ಎಂಬ ಯುವಕ. ಹೆಸರಿನಂತೆಯೇ ಇದು ಪ್ರಯೋಗಾತ್ಮಕ ಚಿತ್ರ.

ಹಲವು ಕಡೆ ಗಂಡಸರು ಗರ್ಭಿಣಿಯಾದ ಸುದ್ದಿಗಳನ್ನು ಓದಿದ ಸಂಜಯ್, ಅದನ್ನೇ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ. ಚಿತ್ರದ ಮುಹೂರ್ತವೂ ನೆರವೇರಿದೆ. ಚಿತ್ರಕ್ಕೆ ಕ್ಲಾಪ್ ಮಾಡಿರೋದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು. ಪ್ರತಾಪ್ ನಾರಾಯಣ್ ನಾಯಕರಾಗಿರುವ ಚಿತ್ರಕ್ಕೆ, ಅರ್ಪಿತಾ ಗೌಡ ನಾಯಕಿಯಾಗಿದ್ದಾರೆ.

ಡಾ. ಟಿ. ಅಕ್ಷತಾ ರಾಮಚಂದ್ರರಾವ್ ಹಾಗೂ ಹೆಚ್.ಟಿ. ಪಾರ್ವತಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ.