ಉಪ್ಪು ಹುಳಿ ಖಾರ ಚಿತ್ರದ ರೋ..ರೋ.. ರೋಮಿಯೋ ಹಾಡು ಸೂಪರ್ ಹಿಟ್ ಆಗಿದೆ. ಚಿತ್ರದ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಹೀಗಾಗಿ ಹಾಡುಗಳು ಬೊಂಬಾಟ್ ಆಗಿ ಬಂದಿವೆ. ಆದರೆ, ರೋ ರೋ ರೋಮಿಯೋ ಚಿತ್ರದ ಹೀರೋಯಿನ್ ಅನುಶ್ರೀ ಹಾಕಿರೋ ಚಾಲೆಂಜ್ಗೆ ಇಡೀ ಚಿತ್ರರಂಗ ಕುಣಿದಿರುವುದು ವಿಶೇಷ.
ಅದು ಈಗ ಅನುಶ್ರೀ ಚಾಲೆಂಜ್ ಆಂತಾನೇ ಫೇಮಸ್ ಆಗಿಬಿಟ್ಟಿದೆ. ರೋ..ರೋ.. ರೋಮಿಯೋಗೆ ಅನುಶ್ರೀ ಹಾಕಿರುವ ಸ್ಟೆಪ್ನ್ನು ನೀವು ಹಾಕಬಲ್ಲಿರಾ ಎಂಬ ಚಾಲೆಂಜ್ಗೆ ಪುನೀತ್, ಸುದೀಪ್, ಪ್ರಿಯಾಮಣಿ, ಶೃತಿ ಹರಿಹರನ್, ಮೇಘನಾ ಗಾಂವ್ಕರ್, ಲಿಟ್ಲ್ ಸ್ಟಾರ್ ಆದ್ಯಾ.. ಅಷ್ಟೇ ಏಕೆ ಆಡಿಯೋ ರಿಲೀಸ್ ದಿನ ಸ್ವತಃ ಅಂಬರೀಷ್ ಕೂಡಾ ಚಾಲೆಂಜ್ ಸ್ವೀಕರಿಸಿದ್ದಾರೆ.
ನೃತ್ಯವನ್ನು ಶಾಸ್ತ್ರೀಯವಾಗಿಯೂ ಕಲಿತಿರುವ ಪುನೀತ್, ಶೃತಿ ಹರಿಹರನ್, ಪ್ರಿಯಾಮಣಿ...ಮೊದಲಾದವರು ಒಂದೇ ಸಲಕ್ಕೆ ಓಕೆ ಎನಿಸಿಬಿಟ್ಟಿದ್ದಾರೆ. ಹಾಡು ನೋಡಿದ ಪ್ರೇಕ್ಷಕರು ರೋ..ರೋ.. ರೋಮಿಯೋ ಎನ್ನುತ್ತಿದ್ಧಾರೆ. ಉಪ್ಪು ಹುಳಿ ಖಾರಕ್ಕೆ ಮಸಾಲೆ ಜೋರಾಗಿದೆ.