ಮಹಾನುಭಾವರು, ಇದೇ ವಾರ ರಿಲೀಸ್ ಆಗುತ್ತಿರುವ ಸಿನಿಮಾ. ಈ ಚಿತ್ರದ ಕಥೆಯೇ ಇಂಟ್ರೆಸ್ಟಿಂಗ್. ಚಿತ್ರದಲ್ಲಿರುವುದು ಗೆಳೆಯರ ಕಥೆ. ಒಬ್ಬ ನಾಳೆ ಬಗ್ಗೆ ಯೋಚನೆ ಇಲ್ಲದೆ, ಇವತ್ತಿನ ಬಗ್ಗೆ ಮಾತ್ರ ಯೋಚನೆ ಮಾಡಿ, ಬಿಂದಾಸ್ ಆಗಿರಬೇಕು ಅಂತ ಬದುಕ್ತಾ ಇರ್ತಾನೆ. ಇನ್ನೊಬ್ಬ, ಮುಂದಿನ ಭವಿಷ್ಯ ಬಗ್ಗೆ ಯೋಚಿಸುತ್ತಾನೆ. ಅವರಿಬ್ಬರ ಕಥೆಯೇ ಚಿತ್ರದ ಹೈಲೈಟ್.
ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ನೀಡಿರುವ ಚಿತ್ರವಿದು. ಅವರು ಬ್ಯುಸಿಯಿದ್ದರೂ, ಅವರೇ ಬೇರೆಯವರ ಹತ್ತಿರ ಮ್ಯೂಸಿಕ್ ತೆಗೆದುಕೊಳ್ಳಿ ಎಂದರೂ ಹಠ ಬಿದ್ದು, ಅವರಿಂದಲೇ ಹಿನ್ನೆಲೆ ಸಂಗೀತ ಮಾಡಿಸಿದ್ದಾರೆ ಚಿತ್ರದ ನಿರ್ದೇಶಕ ಸಂದೀಪ್ ನಾಗಲಿಕರ್. ಚಿತ್ರದ ಸಂಗೀತ ನಿರ್ದೇಶಕ ಸತೀಶ್ ಮೌರ್ಯ. ಹಂಸಲೇಖ ಗರಡಿಯ ಹುಡುಗ. ಚಿತ್ರದ ಒಂದು ಹಾಡನ್ನು ಪುನೀತ್ ರಾಜ್ಕುಮಾರ್ ಹಾಡಿದ್ದರೆ, ಇನ್ನೊಂದು ಹಾಡನ್ನು ಶ್ರೀಮುರಳಿ ಹಾಡಿದ್ದಾರೆ.
ಗೋಕುಲ್ ರಾಜ್, ಅನಿಷ್ಕಾ ರೈ ಹಾಗೂ ಪ್ರಿಯಾಂಕ ಸೇರಿದಂತೆ ಇತರೆ ತಾರಾಬಳಗವೇ ಇಲ್ಲಿದೆ. ಪಾತ್ರವೊಂದಕ್ಕೆ ನಿರ್ಮಾಪಕ ಗೋಕುಲ್ ರಾಜ್ ಕೂಡಾ ಬಣ್ಣ ಹಚ್ಚಿರುವುದು ವಿಶೇಷ.