ಪುನೀತ್ ರಾಜ್‍ಕುಮಾರ್ ಏನೇ ದೊಡ್ಡ ಸ್ಟಾರ್ ಇರಬಹುದು. ಅವರನ್ನು ಮುಖಾಮುಖಿ ಭೇಟಿಯಾದವರು ಮೊದಲು ಶಾಕ್ ಆಗುವುದು ಅವರ ಸರಳತೆಗೆ. ಸಜ್ಜನಿಕೆಯ ಮಾತಿಗೆ. ಪ್ರತಿಯೊಬ್ಬರನ್ನೂ ಗೌರವದಿಂದಲೇ ಮಾತನಾಡಿಸುವ ಪುನೀತ್ ಅವರನ್ನು ನೋಡಿದ ಹೊಸಬರು ಮೊದಲು ಶಾಕ್ ಆಗ್ತಾರೆ. ಆಮೇಲೆ ಅಭಿಮಾನಿಯಾಗ್ತಾರೆ. ಈಗ.. ಹಾಗೆ ಅಭಿಮಾನಿಯಾಗುವ ಸರದಿ ತೆಲುಗು ನಟಿ ಸುರಭಿ ಅವರದ್ದು.
ತೆಲುಗಿನಲ್ಲಿ `ಒಕ ಕ್ಷಣಂ' ಚಿತ್ರದ ಸೆಟ್‍ನಲ್ಲಿ ಸುರಭಿ, ಪುನೀತ್ ಅವರನ್ನು ಭೇಟಿ ಮಾಡಿದ್ದಾರೆ.ಪುನೀತ್ ಅವರ ಸರಳತೆಗೆ ಮಾರು ಹೋಗಿರುವ ಸುರಭಿ, ಭೇಟಿಯ ಕ್ಷಣ ಅದ್ಭುತವಾಗಿದ್ದು ಎಂದು ಹೇಳಿಕೊಂಡಿದ್ದಾರೆ. ಸುರಭಿ ಅವರಿಗೆ ಇಷ್ಟವಾಗಿರುವುದ ಒನ್ಸ್ ಎಗೇಯ್ನ್, ಪುನೀತ್ ಅವರ ಸರಳತೆ, ಸಜ್ಜನಿಕೆ ಎನ್ನುವುದನ್ನು ಬೇರೆ ಹೇಳಬೇಕಿಲ್ಲ.