ರೋ..ರೋ.. ರೋಮಿಯೋ.. ಇದು ಉಪ್ಪು ಹುಳಿ ಖಾರ ಚಿತ್ರದ ಹಾಡು. ಆನ್ಲೈನ್ನಲ್ಲಿ ಟ್ರೆಂಡ್ ಸೃಷ್ಟಿಸಿರುವ ಈ ಹಾಡಿಗೆ ಧ್ವನಿ ನೀಡಿರೋದು ಪುನೀತ್ ರಾಜ್ಕುಮಾರ್. ಹಾಡಿಗೆ ಹೆಜ್ಜೆ ಹಾಕಿರೋದು ಹೊಸ ಹುಡುಗ ಶರತ್ ಹಾಗೂ ಅನುಶ್ರೀ.
ಇಮ್ರಾನ್ ಸರ್ದಾರಿಯಾ ನಿರ್ದೇಶನದ ಚಿತ್ರದಲ್ಲಿ ಹಾಡುಗಳು ಅದ್ಧೂರಿಯಾಗಿರುತ್ತವೆ. ಆ ಅದ್ಧೂರಿತನ ಈ ಹಾಡಿನಲ್ಲೂ ಇದೆ. ಅದರಲ್ಲೂ ಅನುಶ್ರೀ ಮತ್ತು ಶರತ್ ಪೈಪೋಟಿಗೆ ಬಿದ್ದಂತೆ ಕುಣಿದಿರುವ ಹಾಡಿನ ತುಣುಕುಗಳೇ ಈಗ ವೈರಲ್ ಆಗಿವೆ.
ಅಂದಹಾಗೆ ಇದು ಹಾಡಿನ ಮೇಕಿಂಗ್. ಹಾಡಲ್ಲ. ಇನ್ನು ಕಂಪ್ಲೀಟ್ ಹಾಡಿನ ಸ್ಪೆಷಲ್ ರುಚಿ ಹೇಗಿರುತ್ತೋ..?