` ತಾಯಿಗೆ ತಕ್ಕ ಮಗನಿಗೆ ಜೋಡಿ ಸಿಕ್ಕಳು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
thayige thakka maga
Ajai Rao, Ashika Ranganath

ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ ಮೊದಲ ಚಿತ್ರ. ಅಜೇಯ್ ರಾವ್, ಸುಮಲತಾ ಅಂಬರೀಷ್ ನಟಿಸುತ್ತಿರುವ ಚಿತ್ರಕ್ಕೆ ನಾಯಕಿಯ ಆಯ್ಕೆಯೇ ದೊಡ್ಡ ಸವಾಲಾಗಿ ಹೋಗಿತ್ತು. 150ಕ್ಕೂ ಹೆಚ್ಚು ಆರ್ಟಿಸ್ಟ್‍ಗಳ ಅಡಿಷನ್ ಮಾಡಿದ್ದ ಶಶಾಂಕ್‍ಗೆ ನಾಯಕಿಯೇ ಸಿಕ್ಕಿರಲಿಲ್ಲ. ಎಲ್ಲೆಲ್ಲೋ ಹುಡುಕಾಡಿದ್ದ ಶಶಾಂಕ್, ಆಶಿಕಾ ರಂಗನಾಥ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಕ್ರೇಜಿಬಾಯ್ ಮೂಲಕ ಬೆಳ್ಳಿತೆರೆಗೆ ಬಂದ ಹುಡುಗಿ, ನಂತರ ಮುಗುಳುನಗೆ, ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ನಟಿಸಿದ್ದರು. ಶರಣ್ ಜೊತೆ ರ್ಯಾಂಬೋ-2 ಚಿತ್ರದಲ್ಲಿ ನಟಿಸುತ್ತಿರುವ ಆಶಿಕಾ ರಂಗನಾಥ್, ಈಗ ತಾಯಿಗೆ ತಕ್ಕ ಮಗನ ಜೋಡಿಯಾಗಿದ್ದಾರೆ.

ಶಶಾಂಕ್ ಚಿತ್ರಗಳಲ್ಲಿ ನಾಯಕಿಯರೆಂದರೆ ಗ್ಲಾಮರ್ ಗೊಂಬೆಗಳಾಗಿರುವುದಿಲ್ಲ. ಅಭಿನಯಕ್ಕೆ ಅವಕಾಶ ಇದ್ದೇ ಇರುತ್ತೆ. ಆಶಿಕಾ ಅವರಿಂದ ನನ್ನ ಚಿತ್ರದ ಪಾತ್ರಕ್ಕೆ ನ್ಯಾಯ ಸಿಗಲಿದೆ ಎಂಬ ಭರವಸೆ ನನಗಿದೆ. ಆಶಿಕಾ ಅವರಲ್ಲಿ ಪ್ರತಿಭೆ ಮತ್ತು ಸೌಂದರ್ಯ ಎರಡೂ ಇದೆ ಎಂದಿದ್ದಾರೆ ಶಶಾಂಕ್.

ಚಿತ್ರದಲ್ಲಿ ಆಶಿಕಾ ರೆಬಲ್ ನಾಯಕನ ಎದುರು ಸೌಮ್ಯ ಸ್ವಭಾವದ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಸುಮಲತಾ ಅವರ ಎದುರು ನಟಿಸುತ್ತಿರುವುದೇ ಥ್ರಿಲ್ ಆಗಿದೆ ಎಂದಿದ್ದಾರೆ ಆಶಿತಾ.  ವೇದ್‍ಗುರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅಜೇಯ್ ರಾವ್ ನಾಯಕ. ಅಜೇಯ್ ರಾವ್ ತಾಯಿಯಾಗಿ ಸುಮಲತಾ ನಟಿಸುತ್ತಿದ್ದಾರೆ.

Related Articles :-

ತಾಯಿಗೆ ತಕ್ಕ ಮಗ ನಿರ್ದೇಶಕ ಬದಲು

‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ

Thayige Thakka Maga by Shashank - Exclusive