` ಸೈರಾಗೆ ಸುದೀಪ್ ಸೈ ಎಂದಿದ್ದಕ್ಕೆ ಕಾರಣ ಆ ನಿರ್ದೇಶಕ..! - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
sudeep agress for saira
Sudeep Image

ಸುದೀಪ್, ತೆಲುಗಿನ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತ ಚಿತ್ರ ಸೈರಾದಲ್ಲಿ ನಟಿಸುತ್ತಾರಾ..? ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾ ಆಗಿರುವ ಈ ಚಿತ್ರವನ್ನು ಸುದೀಪ್ ಕೈಬಿಟ್ಟರಂತೆ ಎಂಬ ಸುದ್ದಿಗಳೇ ಹರಿದಾಡುತ್ತಿದ್ದವು. ಈಗ ಅದಕ್ಕೆ ವ್ಯತಿರಿಕ್ತ ಎನ್ನುವಂತೆ ಸುದೀಪ್ ಸೈರಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಇಷ್ಟಕ್ಕೂ ಸುದೀಪ್ ಅವರನ್ನು ಸೈರಾ ಚಿತ್ರಕ್ಕೆ ಒಪ್ಪಿಸಿರುವುದು ನಿರ್ದೇಶಕ ಸುರೀಂದರ್ ರೆಡ್ಡಿ.

ಉಯ್ಯಾಲವಾಡ ನರಸಿಂಹ ರೆಡ್ಡಿ, ತೆಲುಗು ನೆಲದ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಹಲವು ವರ್ಷಗಳ ಹಿಂದೆ, ಕೇಂದ್ರ ಸರ್ಕಾರವೇ ಘೋಷಣೆ ಮಾಡಿದೆ. ಹೀಗಾಗಿ ಇದು ನ್ಯಾಷನಲ್ ಲೀಡರ್ ಸಿನಿಮಾ. ಹೀಗಾಗಿಯೇ ಬೇರೆ ಬೇರೆ ಭಾಷೆಗಳಿಂದ ಅತ್ಯುತ್ತಮ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಹಿಂದಿಯಿಂದ ಅಮಿತಾಭ್ ಬರುತ್ತಿದ್ದಾರೆ. ಕನ್ನಡದಿಂದ  ನೀವು ಬರಲೇಬೇಕು. ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು. ಪ್ರತಿಯೊಬ್ಬರಿಗೂ ಉಯ್ಯಾಲವಾಡ ನರಸಿಂಹ ರೆಡ್ಡಿಯ ಹೋರಾಟದ ಪರಿಚಯವಾಗಬೇಕು. ಹೀಗಾಗಿ ನೀವು ಒಪ್ಪಿಕೊಳ್ಳಲೇಬೇಕು ಎಂದು ಹಠ ಹಿಡಿದಿದ್ದಾರೆ ನಿರ್ದೇಶಕ ಸುರೀಂದರ್ ರೆಡ್ಡಿ.

ನಿರ್ದೇಶಕರ ಒತ್ತಾಯಕ್ಕೆ ಮಣಿದ ಸುದೀಪ್, ಕೊನೆಗೂ ಸೈರಾಗೆ ಓಕೆ ಎಂದಿದ್ದಾರೆ. ಸದ್ಯಕ್ಕೆ ಸುದೀಪ್ ಎಷ್ಟೊಂದು ಬ್ಯುಸಿಯೆಂದರೆ, ಸದ್ಯಕ್ಕೆ ದಿ ವಿಲನ್ ಬಿಡುವಿಲ್ಲದಂತೆ ಶೂಟ್ ಆಗುತ್ತಿದೆ. ಜನವರಿ ಆರಂಭದಲ್ಲಿ ಪೈಲ್ವಾನ್ ಚಿತ್ರ ಶುರುವಾಗಬೇಕು. ಅದರ ಮಧ್ಯೆ ಕೋಟಿಗೊಬ್ಬ 3 ಶೂಟಿಂಗ್ ಕೂಡಾ ನಡೆಯಬೇಕು. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೂ ಟೈಂ ಹೊಂದಿಸಿಕೊಳ್ಳಬೇಕು. ಹಾಲಿವುಡ್‍ನ ರೈಸನ್ ಚಿತ್ರ ಕೂಡಾ ಕ್ಯೂನಲ್ಲಿರುತ್ತೆ. 

ಇವೆಲ್ಲದರ ಮಧ್ಯೆ ಸೈರಾಗೆ ಡೇಟ್ಸ್ ಹೊಂದಿಸಿಕೊಳ್ಳಬೇಕಿದೆ ಕಿಚ್ಚ ಸುದೀಪ್.

ಅಂದಹಾಗೆ, ನಮ್ಮಲ್ಲಿ ಸಂಗೊಳ್ಳಿ ರಾಯಣ್ಣ ಹೇಗೋ, ಹಾಗೆಯೇ ಆಂಧ್ರಪ್ರದೇಶದಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿ. ಆತನ ಹೋರಾಟದ ಬಗ್ಗೆ ದಂತಕತೆಗಳೇ ಇವೆ. ಆತನನ್ನು ತೆಲುಗರು ಸೈರಾ ಎಂದೇ ಕರೆಯುತ್ತಾರೆ. ಆ ಪಾತ್ರ ನಿರ್ವಹಿಸುತ್ತಿರುವುದು  ಚಿರಂಜೀವಿ. ಸುದೀಪ್ ಪಾತ್ರ ಏನು ಎಂಬ ಕುತೂಹಲ ಇನ್ನೂ ಚಾಲ್ತಿಯಲ್ಲಿದೆ. 

#

Edakallu GuddadaMele Movie Gallery

Rightbanner02_backasura_inside

Dandupalya 3 Movie Gallery