ತಮಿಳುನಟ ಕಮಲ್ ಹಾಸನ್, ರಾಜಕೀಯ ಪ್ರವೇಶವನ್ನು ಘೋಷಿಸಿ, ಆ್ಯಪ್ ಬಿಡುಗಡೆ ಮಾಡಿರುವುದು ಗೊತ್ತಿದೆಯಷ್ಟೇ. ಈಗ ಉಪೇಂದ್ರ ಕೂಡಾ ಅದೇ ಹಾದಿಯಲ್ಲಿ ಮುನ್ನಡೆದಿದ್ದಾರೆ. ಹಾಗೆ ನೋಡಿದರೆ, ಉಪೇಂದ್ರ ಅವರಿಗೆ ತಾವು ನಡೆಯಬೇಕಾದ ರಾಜಕೀಯ ದಾರಿಯ ಬಗ್ಗೆ ಕಮಲ್ ಹಾಸನ್ ಅವರಿಗಿಂತ ಹೆಚ್ಚು ಸ್ಪಷ್ಟತೆಯಿದೆ.
ಕೆಪಿಜೆಪಿ ಆ್ಯಪ್ ಬಿಡುಗಡೆ ಮಾಡಿರುವ ಉಪೇಂದ್ರ, ಆ್ಯಪ್‍ನಲ್ಲೇ ಪಕ್ಷದ ಪ್ರಚಾರ, ಅರ್ಜಿ ಸ್ವೀಕಾರ ಎಲ್ಲವನ್ನೂ ನಡೆಸಲು ನಿರ್ಧರಿಸಿದ್ಧಾರೆ. ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ ಆಯ್ಕೆ ಮಾಡಲಾಗುವುದು. ಅವಿದ್ಯಾವಂತರೂ ಅರ್ಜಿ ಸಲ್ಲಿಸಬಹುದು. ಆದರೆ, ಅವರು ಪ್ರಜ್ಞಾವಂತರಾಗಿರಬೇಕು. ಅದು ಉಪ್ಪಿ ಕಂಡೀಷನ್.
ಇನ್ನು ಈ ಚುನಾವಣೆಯಲ್ಲಿ ಉಪೇಂದ್ರ ಕುಂದಾಪುರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯನ್ನು ಉಪೇಂದ್ರ ತಳ್ಳಿ ಹಾಕಿದ್ದಾರೆ. ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸ್ಪರ್ಧಿಸುವುದು ಖಚಿತ, ಎಲ್ಲಿಂದ ಎನ್ನುವುದು ನಿರ್ಧಾರವಾಗಿಲ್ಲ ಎಂದಿದ್ಧಾರೆ ಉಪೇಂದ್ರ.
ಉಪೇಂದ್ರ ಅವರ ರಾಜಕೀಯದ ಬಗ್ಗೆ ಅಲ್ಲಲ್ಲ.. ಪ್ರಜಾಕೀಯದ ಬಗ್ಗೆ ಆಸಕ್ತಿ ಇದ್ದವರು ಗೂಗಲ್ ಪ್ಲೇ ಸ್ಟೋರ್‍ಗೆ ಹೋಗಿ ಪ್ರಜಾಕೀಯ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದು.