ಕಳೆದ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಗೀತಾ ಶಿವರಾಜ್ ಕುಮಾರ್ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜೆಡಿಎಸ್ ಟಿಕೆಟ್‍ನಲ್ಲಿ ಕಣಕ್ಕಿಳಿದಿದ್ದ ಗೀತಾ ಅವರ ಪರ ಚಿತ್ರರಂಗದ ಹಲವು ನಾಯಕರು ಪ್ರಚಾರವನ್ನೂ ನಡೆಸಿದ್ದರು. ಆದರೆ, ರಾಜಕೀಯವೇ ಬೇರೆ. ಸಿನಿಮಾ ಕ್ಷೇತ್ರವೇ ಬೇರೆ. ದೊಡ್ಮನೆಯ ಸೊಸೆಯಾಗಿ ಕಣಕ್ಕಿಳಿದಿದ್ದ ಗೀತಾಗೆ ಗೆಲುವು ಸಿಕ್ಕಿರಲಿಲ್ಲ. ಈ ಬಾರಿಯ ಪರಿಸ್ಥಿತಿಯೇ ಬೇರೆ. ಆದರೆ, ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ.
ಹಾಗೆ ನೋಡಿದರೆ, ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಜೊತೆ ಶಿವರಾಜ್ ಕುಮಾರ್ ಉತ್ತಮ ಸ್ನೇಹವಿಟ್ಟುಕೊಂಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರ ತಮ್ಮ ಮಧು ಬಂಗಾರಪ್ಪ, ಈಗಲೂ ಜೆಡಿಎಸ್‍ನಲ್ಲಿ ಪ್ರಭಾವಿ ಶಾಸಕ, ಅಲ್ಲದೆ ಕುಮಾರಸ್ವಾಮಿಯವರ ಆಪ್ತ ಕೂಡಾ. ಹಾಗೆಂದು ಈ ಸ್ನೇಹ ಜೆಡಿಎಸ್ ನಾಯಕರಿಗಷ್ಟೇ ಸೀಮಿತವಾಗಿಲ್ಲ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸೇರಿದಂತೆ ಎಲ್ಲ ಪಕ್ಷದ ನಾಯಕರ ಜೊತೆಯಲ್ಲೂ ಸ್ನೇಹವಿಟ್ಟುಕೊಂಡಿದೆ ರಾಜ್ ಕುಟುಂಬ. ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದಾಗ ಖುದ್ದು ರಾಹುಲ್ ಗಾಂಧಿಯವರೇ ಸಾಂತ್ವನ ಹೇಳಲು ಬಂದಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು.
ಅವುಗಳನ್ನೆಲ್ಲ ಪಕ್ಕಕ್ಕಿಟ್ಟು ಚುನಾವಣೆಯಿಂದ ದೂರ ಉಳಿಯಲು ಗೀತಾ ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ. ಒಂದೇ ಚುನಾವಣೆಗೆ ಗೀತಾ ಅವರಿಗೆ ರಾಜಕೀಯ ಸಾಕು ಸಾಕು ಎನ್ನುವಂತಾಗಿ ಹೋಯ್ತೇನೋ.