ಅಂಬರೀಷ್ ಮತ್ತು ಸುಹಾಸಿನಿ, ಆತ್ಮೀಯ ಸ್ನೇಹಿತರು. ಆದರೆ, ಜೊತೆಗೆ ನಟಿಸಿರುವುದು ಒಂದೇ ಚಿತ್ರದಲ್ಲಿ. ಅದು ಅಣ್ಣಾವ್ರು. ಈಗ ಮತ್ತೊಮ್ಮೆ ಜೋಡಿಯಾಗುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ತಯಾರಾಗುತ್ತಿರುವ ಅಂಬಿ ನಿಂಗೆ ವಯಸ್ಸಾಯ್ತು ಕಣೋ ಚಿತ್ರದಲ್ಲಿ ಅಂಬರೀಷ್ ಮತ್ತು ಸುಹಾಸಿನಿ, ಸೀನಿಯರ್ ಜೋಡಿಯ ಪಾತ್ರ ಮಾಡುತ್ತಿದ್ದಾರೆ.
ಅದೇ ಚಿತ್ರದಲ್ಲಿ ಅಂಬರೀಷ್ ಯುವಕನಾಗಿದ್ದಾಗಿನ ಪಾತ್ರ ನಿರ್ವಹಿಸುತ್ತಿರುವುದು ಸುದೀಪ್. ಅವರಿಗಿನ್ನೂ ನಾಯಕಿ ಸಿಕ್ಕಿಲ್ಲ. ತಮಿಳಿನ ಪವರ್‍ಪಾಂಡಿ ಚಿತ್ರದ ರೀಮೇಕ್ ಆಗಿರುವ ಈ ಚಿತ್ರ, ಸೆಟ್ ಏರುವ ಮುನ್ನವೇ ಕುತೂಹಲ ಮೂಡಿಸಿದೆ. ಮೂಲ ಚಿತ್ರದಲ್ಲಿ ರಾಜ್‍ಕಿರಣ್ ಮತ್ತು ರೇವತಿ ನಟಿಸಿದ್ದ ಪಾತ್ರದಲ್ಲಿ, ಅಂಬಿ, ಸುಹಾಸಿನಿ ನಟಿಸಲಿದ್ದಾರೆ.