ತೂಗುದೀಪ ಶ್ರೀನಿವಾಸ್ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೂರದ ಸಂಬಂಧಿಯಾಗಿರುವ ಮನೋಜ್, ಈಗ ಹೀರೋ ಆಗಿ ತೆರೆಗೆ ಬರುತ್ತಿದ್ದಾರೆ. ದರ್ಶನ್ ಜೊತೆ ಅಂಬರೀಷ, ಚಕ್ರವರ್ತಿ ಸಿನಿಮಾಗಳಲ್ಲಿ ನಟಿಸಿರುವ ಮನೋಜ್, ದರ್ಶನ್ ಅವರಷ್ಟೇ ಹೈಟ್ ಇದ್ದಾರೆ. ಪರ್ಸನಾಲಿಟಯೂ ಜಬರ್‍ದಸ್ತಾಗಿದೆ.
ಸದ್ಯಕ್ಕೆ ಮನೋಜ್ ಅರವಿಂದ್ ಕೌಶಿಕ್ ಅವರ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸುತ್ತಾಡುತ್ತಿದೆ. ಆದರೆ, ಅಧಿಕೃತವಾಗಿಲ್ಲ.