` ರೊಮ್ಯಾನ್ಸ್ ಮಾಡಿದ್ದಕ್ಕೆ ಖುಷಿಯಾದ ಅನಿತಾ ಭಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
anitha bhat in vaishakini
Anitha Bhat Image

ಅನಿತಾ ಭಟ್. ಸೈಕೋ ಚಿತ್ರದ ಮೂಲಕ ಪರಿಚಯವಾಗಿದ್ದ ಈ ಹುಡುಗಿಗೆ ಅನಂತರ ಅಷ್ಟು ದೊಡ್ಡ ಮಟ್ಟದ ಅವಕಾಶ ಸಿಗಲೇ ಇಲ್ಲ ಎನ್ನಬೇಕು. ಅದು ವೈಶಾಖಿನಿ ಚಿತ್ರದಲ್ಲಿ ಈಡೇರಿದೆಯಂತೆ. ಚಿತ್ರ ಹಾರರ್ ಥ್ರಿಲ್ಲರ್ ಸಿನಿಮಾ. ಪುನರ್ಜನ್ಮದ ಶೇಡ್ ಕೂಡಾ ಇದೆ. ಹೀಗಾಗಿ ಅಭಿನಯಕ್ಕಂತೂ ಸಿಕ್ಕಾಪಟ್ಟೆ ಅವಕಾಶವಿದೆ.

ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಹೀರೋ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ಈ ಬಾರಿ ಅದೂ ಕೂಡಾ ಈಡೇರಿದೆ. ಹೀರೋ ಜೊತೆ ರೊಮ್ಯಾನ್ಸ್ ಮಾಡಿದ್ದೇನೆ ಎಂದು ಖುಷಿಯಾಗಿದ್ದಾರೆ ಅನಿತಾ. 

ಚಿತ್ರದಲ್ಲಿ ಅನಿತಾ ರಾಜಕುಮಾರಿ. ಪವನ್ ಶೆಟ್ಟಿ ರಾಜಕುಮಾರ. ಇಬ್ಬರೂ ಮದುವೆಯಾಗಿ ಮಧುಚಂದ್ರಕ್ಕೆ ಹೋದಾಗ, ಆಕಸ್ಮಿಕವಾಗಿ ಋಷಿಯೊಬ್ಬನ ಕಣ್ಣಿಗೆ ಬೀಳುತ್ತಾರೆ. ಅನಿತಾರ ಸೌಂದರ್ಯಕ್ಕೆ ಹುಚ್ಚನಾಗುವ ಆ ಋಷಿ, ಕೊನೆಗೆ ಅವರನ್ನೇ ಕೊಂದುಬಿಡುತ್ತಾನೆ. ಪುನರ್ಜನ್ಮದಲ್ಲಿ ಮತ್ತೊಮ್ಮೆ ಹುಟ್ಟುವ ಪ್ರೇಮಿಗಳು ಆ ಋಷಿಯನ್ನು ಹೇಗೆ ಕೊಲ್ಲುತ್ತಾರೆ ಎನ್ನುವುದೇ ಚಿತ್ರದ ಕಥೆ ಎಂದಿದ್ದಾರೆ ಅನಿತಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery