ಬಿಗ್‍ಬಾಸ್‍ನಲ್ಲಿ ಕಿಚ್ಚನ್ ಕಿಚನ್ ವೀಕೆಂಡ್‍ನಲ್ಲಿ ಫೇಮಸ್ ಆಗುತ್ತಿದೆ. ಆದರೆ, ಈ ಕಿಚ್ಚನ್ ಕಿಚನ್‍ನಲ್ಲಿ ಕಿಚ್ಚ ಸುದೀಪ್ ತಮ್ಮ ಗಿರ್‍ಮಿಟ್ ಪ್ರೇಮವನ್ನು ಬಹಿರಂಗಪಡಿಸಿದ್ದಾರೆ. ಅದನ್ನು ಅವರು ಹೇಳಿಕೊಂಡಿರೋದು ಕಿಚ್ಚನ್ ಕಿಚನ್‍ಗೆ ಅತಿಥಿಯಾಗಿ ಬಂದಿದ್ದ ನಟಿ ಮಯೂರಿ ಅವರ ಜೊತೆ.
ಅತಿಥಿಯಾಗಿದ್ದ ಮಯೂರಿ, ಸುದೀಪ್ ಅವರಿಗೆ ಗಿರ್‍ಮಿಟ್ ಮಾಡಿಕೊಟ್ರು. ಇದನ್ನು ಬಾಯ್ತುಂಬಾ ಸವಿದ ಸುದೀಪ್, ತಾವು ಉ.ಕರ್ನಾಟಕಕ್ಕೆ ಹೋದಾಗ ಗಿರ್‍ಮಿಟ್‍ನ್ನು ಮಿಸ್ ಮಾಡಿಕೊಳ್ಳೋದಿಲ್ಲ ಎನ್ನುವುದನ್ನು ಹೇಳಿಕೊಂಡ್ರು. ಗಿರ್‍ಮಟ್‍ಗೆ ಬೇಕಾಗುವ ಚುರುಮುರಿ ಸೇರಿದಂತೆ, ಎಲ್ಲವನ್ನೂ ಮನೆಯಿಂದಲೇ ತಂದಿದ್ದ ಮಯೂರಿ, ಗಿರ್‍ಮಿಟ್ ಮಾಡೋದು ಹೇಗೆ ಅನ್ನೋದನ್ನು ಸುದೀಪ್ ಅವರಿಗೆ ಹೇಳಿಕೊಟ್ರು.