` ಅಭಿಮಾನದ ಹುಚ್ಚು ಕಾಲನ್ನೇ ತೆಗೆಯಿತು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
duniya vijay fan looses his leg
Duniya Vijay Mad Fad looses his leg

ಅಭಿಮಾನ ಅತಿರೇಕವಾಗಬಾರದು, ಈ ಮಾತನ್ನು ಸ್ಟಾರ್​ ನಟರೆಲ್ಲ ತಮ್ಮ ತಮ್ಮ ಅಭಿಮಾನಿಗಳಿಗೆ ಹೇಳುತ್ತಲೇ ಇರುತ್ತಾರೆ. ಆದರೆ, ಹುಚ್ಚು ಅಭಿಮಾನಿಗಳು ಅದನ್ನು ಕೇಳುವುದೇ ಇಲ್ಲ. ಅದಕ್ಕೆ ಸಾಕ್ಷಿ ಯಾದಗಿರಿಯಲ್ಲಿ ನಡೆದಿರುವ ಈ ಘಟನೆ. 

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಜ್ಜಲ್ ಗ್ರಾಮದ ಯುವಕ ಹುಲಗಪ್ಪ ದುನಿಯಾ ವಿಜಿ ಅಭಿಮಾನಿ. ಜಂಗ್ಲಿ ಅನ್ನೋದು ಅವನ ಅಡ್ಡಹೆಸರು. ಕೈ, ತೋಳುಗಳ ಮೇಲೆ ಜಂಗ್ಲಿ, ಜಾನಿ ಎಂದೆಲ್ಲ ಹಚ್ಚೆ ಹಾಕಿಸಿಕೊಂಡಿದ್ದ ಹುಲಗಪ್ಪ, ಮನೆಯ ತುಂಬಾ ದುನಿಯಾ ವಿಜಿ ಫೋಟೋಗಳನ್ನೇ ತುಂಬಿಕೊಂಡಿದ್ದಾನೆ. 

ಇಂಥ ಅಭಿಮಾನಿಗೆ ಅವನ ಗೆಳೆಯರು ಒಂದು ಸವಾಲು ಹಾಕಿದರು. ದುನಿಯಾ ವಿಜಯ್​ ರೀತಿಯಲ್ಲೇ ಸ್ಟಂಟ್ ಮಾಡಿ ತೋರಿಸು, ಆಗ ನೀನು ದುನಿಯಾ ವಿಜಿ  ಅಭಿಮಾನಿ ಅಂತಾ ಒಪ್ಪಿಕೊಳ್ಳುತ್ತೇವೆ ಎಂದರು. ಅದನ್ನು ಸವಾಲಾಗಿ ಸ್ವೀಕರಿಸಿದ ಹುಲಗಪ್ಪ, ಸುಮಾರು 15 ಅಡಿ ಎತ್ತರದ ಗೋಡೆ ಮೇಲಿಂದ ಜಂಪ್ ಮಾಡಿಬಿಟ್ಟ. ಸಿನಿಮಾ ಸ್ಟಂಟ್​ಗಳೇ ಬೇರೆ, ರಿಯಲ್ ಲೈಫೇ ಬೇರೆ ಎಂಬ ಅರಿವಿಲ್ಲದ ಹುಲಗಪ್ಪನ ಪಾದದ ಮೂಳೆಗಳು ಈಗ ಮುರಿದಿವೆ.  ಹಾಸಿಗೆ ಹಿಡಿದಿರುವ ಹುಲಗಪ್ಪನಿಗೆ ಓಡಾಡೋಕೂ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ಹೋಗೋಕೆ ಹಣವೂ ಇಲ್ಲ.

ಮನೆಗೆ ಇವನೇ ಹಿರಿಯ ಮಗ. ಅಭಿಮಾನದ ಅತಿರೇಕ ಈಗ ಇವನ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಿದೆ.

 

Kurukshetra Celebrity Show Gallery

Rightbanner02_gimmick_inside

Nanna Prakara Movie Images