ನವೆಂಬರ್ 7ನೇ ತಾರೀಕು ಒಬ್ಬರು ವಿಶೇಷ ಅತಿಥಿ ಬರುತ್ತಿದ್ದಾರೆ. ಅಭಿಮಾನಿಗಳೇ, ನಿಮಗೊಂದು ಸಿಹಿ ಸುದ್ದಿ ಕೊಡುತ್ತಿದ್ದೇವೆ. ಕಾಯ್ತಾ ಇರಿ. ಈ ಮಾತನ್ನು ಒಬ್ಬರೋ ಇಬ್ಬರೋ ಹೇಳಿದ್ದರೆ ಪರವಾಗಿಲ್ಲ.
ರೆಬಲ್‍ಸ್ಟಾರ್ ಅಂಬರೀಷ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ.. ಹೀಗೆ ಹಲವರು ವಿಡಿಯೋ ಸಂದೇಶದ ಮೂಲಕ ಕುತೂಹಲ ಸೃಷ್ಟಿಸಿಬಿಟ್ಟಿದ್ದಾರೆ.
ಅದು ಪ್ರೇಮ ಬರಹದ ಪ್ರಮೋಷನ್‍ಗೆ ಮಾಡಿರುವ ಐಡಿಯಾನಾ..? ಇರಬಹುದು. ಏಕೆಂದರೆ, ಅರ್ಜುನ್ ಸರ್ಜಾ ಅವರ ಮಗಳು ನಟಿಸಿರುವ ಚಿತ್ರ ಪ್ರೇಮ ಬರಹ. ಅದೇನೂ ಗುಟ್ಟಾಗಿಲ್ಲ. ಹೀಗಿದ್ದರೂ.. ನ.7ರ ಆ ಸಸ್ಪೆನ್ಸ್ ಏನು.? ಸ್ಪೆಷಲ್ ಗೆಸ್ಟ್ ಯಾರು..? ಕುತೂಹಲ ಹೆಚ್ಚುತ್ತಲೇ ಇದೆ.
ವಿಶೇಷವೆಂದರೆ, ಈ ವಿಡಿಯೋ ಮಾಡಿದ ಸ್ಟಾರ್‍ಗಳೂ ಅಷ್ಟೆ.. ನಮಗೂ ಗೊತ್ತಿಲ್ಲ ಎನ್ನುತ್ತಿದ್ದಾರೆ. ಇಷ್ಟೊಂದು ಸಸ್ಪೆನ್ಸ್ ಸೃಷ್ಟಿಸಿರುವ ನ.7ರವರೆಗೂ ಕಾಯೋಣ.