ಮಾಸ್ತಿಗುಡಿ ಚಿತ್ರದ ಚಿತ್ರೀಕರಣ ವೇಳೆ ದುರಂತ ಸಾವಿಗೀಡಾದ ಅನಿಲ್, ಉದಯ್ರನ್ನು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ಅದು ಸಾಯುವ ವಯಸ್ಸಾಗಿರಲಿಲ್ಲ. ಹಾಗೆ ಅಕಾಲಮರಣಕ್ಕೀಡಾದವರನ್ನು ಚಿರಂಜೀವಿಗಳಾಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಚಿತ್ರ ನಿರ್ಮಾಪಕ ಸುಂದರ್ ಗೌಡ ಹಾಗೂ ಅವರ ಸ್ನೇಹಿತರು.
ಅನಿಲ್ ಉದಯ್ ಹೆಸರಲ್ಲಿ ಚಾರಿಟಬಲ್ ಟ್ರಸ್ಟ್ ಆರಂಭಿಸಿರುವ ನಿರ್ಮಾಪಕ ಸುಂದರ್ ಗೌಡ, ಟ್ರಸ್ಟ್ ಮೂಲಕ ಬಡಮಕ್ಕಳಿಗೆ ಶಿಕ್ಷಣ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನ.7ನೇ ತಾರೀಕು ಕಾರ್ಯಕ್ರಮವೂ ನಿಗದಿಯಾಗಿದೆ.
ಅನಿಲ್ & ಉದಯ್ ಅವರನ್ನು ಚಿತ್ರರಂಗಕ್ಕೆ ಕರೆತಂದು ಪ್ರೋತ್ಸಾಹಿಸಿದ್ದ ದುನಿಯಾ ವಿಜಿ ಕೂಡಾ ಈ ಕೆಲಸಕ್ಕೆ ಬೆನ್ನೆಲುಬಾಗಿದ್ದಾರೆ. ಅಷ್ಟೆ ಅಲ್ಲ, ಕದಿರೇನಹಳ್ಳಿಯಲ್ಲಿ ಇಬ್ಬರೂ ಕಲಾವಿದರ ಪುತ್ಥಳಿ ಅನಾವರಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಜೊತೆಯಾಗಿರುವುದು ಅನಿಲ್ & ಉದಯ್ ಅವರ ಗೆಳೆಯರ ಬಳಗ.
ಬಡ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ಉದಯ್ ಮತ್ತು ಅನಿಲ್ ಚಿರಂಜೀವಿಗಳಾಗಿ ಉಳಿಯಲಿದ್ದಾರೆ ಎನ್ನುವುದು ಅನಿಲ್, ಉದಯ್ ಗೆಳೆಯರ ನಂಬಿಕೆ.