ಕ್ರೇಜಿಸ್ಟಾರ್ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಂ ಅವರ ಮೊದಲ ಚಿತ್ರವೇ ಮುಂದೆ ಹೋಗಿದೆ. ನಾಗಶೇಖರ್ ನಿರ್ದೇಶನದ, ಶ್ರೀನಿವಾಸ್ ನಿರ್ಮಾಣದ ಈ ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿತ್ತು. ಆದರೆ, ನಿರ್ಮಾಪಕ, ನಿರ್ದೇಶಕರಿಬ್ಬರೂ ತಮ್ಮ ತಮ್ಮ ಹಳೆಯ ಕಮಿಟ್‍ಮೆಂಟ್‍ಗಳಿಗೋಸ್ಕರ ವಿಕ್ರಂ ಚಿತ್ರವನ್ನು ಮುಂದೂಡಿದ್ದಾರೆ.
ಚಿತ್ರ ಯಾವಾಗ ಶುರುವಾಗುತ್ತೆ ಅನ್ನೋದು ಗೊತ್ತಿಲ್ಲ. ಕೆಲವು ತಿಂಗಳುಗಳೇ ಬೇಕಾಗಬಹುದು ಎಂದಿದ್ದಾರೆ ವಿಕ್ರಂ ರವಿಚಂದ್ರನ್. ಇದರ ಮಧ್ಯೆ ವಿಕ್ರಂಗೆ ಹಲವರು ಕಥೆ ಹೇಳಿದ್ದಾರೆ. ಅವುಗಳಲ್ಲಿ ಯಾವುದಾದರೂ ಇಷ್ಟವಾದರೆ, ತಮ್ಮ ಲಾಂಚಿಂಗ್ ಸಿನಿಮಾ ರೆಡಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ವಿಕ್ರಂ.