ಬಟರ್ ಫ್ಲೈ. ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ. ಹಿಂದಿಯ ಕ್ವೀನ್ ಚಿತ್ರದ ರೀಮೇಕ್. ಕನ್ನಡದಲ್ಲಿ ಪಾರುಲ್ ಯಾದವ್ ನಾಯಕಿ. ತೆಲುಗಿನಲ್ಲಿ ತಮನ್ನಾ, ತಮಿಳಿನಲ್ಲಿ ಕಾಜಲ್ ಅಗರ್‍ವಾಲ್ ನಟಿಸುತ್ತಿದ್ದಾರೆ. ಇವರೆಲ್ಲರೂ ಆಯಾಯಾ ಭಾಷೆಗಳಲ್ಲಿ ನಿರ್ವಹಿಸುವುದು ಕಂಗನಾ ರಣಾವತ್ ಪಾತ್ರ.
ಇನ್ನು ಲೀಸಾ ಹೇಡನ್ ನಿರ್ವಹಿಸಿದ್ದ ಪಾತ್ರವನ್ನು ಆ್ಯಮಿ ಜಾಕ್ಸನ್ ಮಾಡಬೇಕಿತ್ತು. ನಾಲ್ಕೂ ಭಾಷೆಗಳಲ್ಲಿ ಅವರೇ ನಟಿಸಬೇಕಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದಾಗಿ ಹಿಂದೆ ಸರಿದಿದ್ದಾರೆ ಆ್ಯಮಿ ಜಾಕ್ಸನ್. ಆ್ಯಮಿ ಜಾಕ್ಸನ್ ಪಾತ್ರಕ್ಕೆ ಈಗ ಇಬ್ಬರು ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ವೀಡನ್ ಚೆಲುವೆ ಎಲಿ ಅಬ್ರಹಾಂ ಹಾಗೂ ಶಿಬಾನಿ ದಾಂಡೇಕರ್.
ಪರೂಲ್ ಯಾದವ್ ಕನ್ನಡದಲ್ಲಿ ನಾಯಕಿಯಷ್ಟೇ ಅಲ್ಲ, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು. ಚಿತ್ರದ ಶೂಟಿಂಗ್ ಎರಡು ತಿಂಗಳು ಪ್ಯಾರಿಸ್‍ನಲ್ಲೇ ನಡೆಯಲಿದೆ. ನಾಲ್ಕು ಮಂದಿ ನಾಯಕಿಯರು ಒಟ್ಟಿಗೇ ಸೆಟ್‍ನಲ್ಲಿರುವುದು ವಿಶೇಷ ಅನುಭವ ಎಂದಿದ್ದಾರೆ ಪರೂಲ್ ಯಾದವ್.