` ಡಬಲ್ ಮೀನಿಂಗ್ ಸಿನಿಮಾ ನಿರ್ಮಾಪಕ ಬಂಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
double meaning producer
Prathap Image

ಆತನ ಹೆಸರು ಪ್ರತಾಪ್. ಸಿನಿಮಾ ನಿರ್ದೇಶಕನಾಗಬೇಕೆಂಬ ಗೀಳು ಅಂಟಿಕೊಂಡಿತ್ತು. ತುಮಕೂರು ಜಿಲ್ಲೆಯ ಮಧುಗಿರಿಯವನಾದ ಪ್ರತಾಪ್, ಬಿಬಿಎಂಪಿಯಲ್ಲಿ ಗುತ್ತಿಗೆದಾರನಾಗಿದ್ದ. ಆದರೆ, ಸಿನಿಮಾ ಗೀಳು ಹೋಗಿರಲಿಲ್ಲ. ಚಿತ್ರದ ಕಥೆ ಕೇಳಿದ ಹಲವು ನಿರ್ಮಾಪಕರು ಪ್ರತಾಪ್‍ನನ್ನು ಹೀಯಾಳಿಸಿ ಕಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಪ್ರತಾಪ್ ಡಬಲ್ ಮೀನಿಂಗ್ ಅನ್ನೋ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ.

ಚಿತ್ರದ ಟ್ರೇಲರ್‍ನ್ನೂ ಸಿದ್ಧ ಮಾಡಿ ಯೂಟ್ಯೂಬ್‍ಗೆ ಬಿಟ್ಟ. ಆದರೆ, ಸಿನಿಮಾ ಕಂಟಿನ್ಯೂ ಮಾಡೋಕೆ ಹಣ ಇರಲಿಲ್ಲ. ಹಣಕ್ಕಾಗಿ ಅವನು ಹಿಡಿದ ದಾರಿ ಸರಗಳ್ಳತನ. ಆರಂಭದಲ್ಲಿ ಯಶಸ್ವಿಯಾಗಿ ಸರಗಳ್ಳತನ ಮಾಡಿದ್ದ ಪ್ರತಾಪ್,  ಬಸವೇಶ್ವರ ನಗರದಲ್ಲಿ ಮಾಡಿದ ಸರಗಳ್ಳತನದಲ್ಲಿ ಸಿಕ್ಕಿಬಿದ್ದಿದ್ದ. ಈಗ ಜೈಲು ಪಾಲಾಗಿದ್ದಾನೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery