Print 
yogi, sahitya,

User Rating: 0 / 5

Star inactiveStar inactiveStar inactiveStar inactiveStar inactive
 
yogi sahitya marriage
Sahitya - Yogi Marriage

ನಟ ಲೂಸ್‍ಮಾದ ಖ್ಯಾತಿಯ ಯೋಗಿ ಹಸೆಮಣೆ ಏರುತ್ತಿದ್ದಾರೆ. ದೀರ್ಘಕಾಲದ ಗೆಳತಿ ಸಾಹಿತ್ಯ ಅವರನ್ನ ನ.2ರಂದು ಕೈ ಹಿಡಿಯಲಿದ್ದಾರೆ ಯೋಗಿ. 

ಶ್ರೀ ಕನ್ವೆನ್ಷನ್ ಹಾಲ್ ಸೆಂಟರ್ ನಮ.15/3, 80 ಅಡಿ ರಸ್ತೆ, ಬ್ರಿಗೇಡ್ ಒಮೆಗಾ ಹತ್ತಿರ, ಚನ್ನಸಂದ್ರ, ಬನಶಂಕರಿ 6ನೇ ಹಂತ, 1ನೇ ಬ್ಲಾಕ್. ಇದು ಕಲ್ಯಾಣಮಂಟಪದ ಅಡ್ರೆಸ್. ಮದುವೆ ಅದ್ಧೂರಿಯಾಗಿ ನೆರವೇರಲಿದೆ. 

ಇದೇ ಗುರುವಾರ ಬೆಳಗ್ಗೆ 5 ರಿಂದ 6 ಗಂಟೆಯ ಶುಭ ತುಲಾ ಲಗ್ನದಲ್ಲಿ ಮುಹೂರ್ತ ನಡೆಯಲಿದೆ. ಗುರುವಾರ ಸಂಜೆ 6 ಗಂಟೆಗೆ ಆರತಕ್ಷತೆ.

ವಿಶೇಷವೆಂದರೆ, ಸಾಹಿತ್ಯ ಐಟಿ ಉದ್ಯೋಗಿ. ಸಿನಿಮಾ ರಂಗಕ್ಕೂ ಅವರಿಗೂ ಯಾವ ನಂಟೂ ಇಲ್ಲ. ಜೂನ್ 11ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ, ಯೋಗೀಶ್ ಅವರ ಜೀವದ ಗೆಳತಿ. ನ.2 ರಿಂದ ಜೀವನ ಗೆಳತಿಯಾಗಲಿದ್ದಾರೆ.